Select Your Language

Notifications

webdunia
webdunia
webdunia
webdunia

ಅಪರಾಧ ಹಿನ್ನೆಲೆಯ ಅಭ್ಯರ್ಥಿಯ ವಿವರವನ್ನು 48 ಗಂಟೆಯೊಳಗೆ ಪ್ರಕಟಿಸಬೇಕು: ಸುಪ್ರೀಂ ಕೋರ್ಟ್

ಅಪರಾಧ ಹಿನ್ನೆಲೆಯ ಅಭ್ಯರ್ಥಿಯ ವಿವರವನ್ನು 48 ಗಂಟೆಯೊಳಗೆ ಪ್ರಕಟಿಸಬೇಕು: ಸುಪ್ರೀಂ ಕೋರ್ಟ್
ನವದೆಹಲಿ , ಮಂಗಳವಾರ, 10 ಆಗಸ್ಟ್ 2021 (14:32 IST)
ನವದೆಹಲಿ, ಆ. 10: ರಾಜಕೀಯದಲ್ಲಿ ಅಪರಾಧ ಹಿನ್ನೆಲೆ ಇರುವವರ ಸಂಖ್ಯೆ ಹೆಚ್ಚುತ್ತಿರುವ ಕಳವಳಕಾರಿ ಸಂಗತಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯವನ್ನು ಅಪರಾಧಮುಕ್ತಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಇಂದು ಮಹತ್ವದ ನಿರ್ದೇಶನ ಹೊರಡಿಸಿದೆ.

ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳು ಅಭ್ಯರ್ಥಿಗಳಲ್ಲಿ ಯಾವುದಾದರೂ ಕ್ರಿಮಿನಲ್ ಕೇಸ್ಗಳು ಇದ್ದರೆ ಅದನ್ನ ಆ ಅಭ್ಯರ್ಥಿಯ ಆಯ್ಕೆಯಾದ 48 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಹೊರಡಿಸಿದೆ. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಇದೇ ವಿಚಾರದಲ್ಲಿ ಇದೇ ರೀತಿಯ ತೀರ್ಪು ನೀಡಿತ್ತು. ರಾಜಕೀಯ ಪಕ್ಷಗಳು ಅಭ್ಯರ್ಥಿಯಲ್ಲಿ ಕ್ರಿಮಿನಲ್ ಕೇಸ್ ಇದ್ದರೆ ಅದರ ಮಾಹಿತಿಯನ್ನ 48 ಗಂಟೆಯೊಳಗೆ ಪ್ರಕಟಿಸಬೇಕು. ಅಥವಾ ನಾಮಪತ್ರ ಸಲ್ಲಿಕೆಯ ದಿನಕ್ಕೆ 2 ವಾರ ಮುಂಚಿತವಾಗಿ ಪ್ರಕಟಿಸಬೇಕು ಎಂದು ತನ್ನ ತೀರ್ಪಿನ 4.4 ಪ್ಯಾರಾಗ್ರಾಫ್ನಲ್ಲಿ ನ್ಯಾಯಪೀಠ ತಿಳಿಸಿತ್ತು. ಇದೀಗ ಎರಡನೇ ಅಂಶವನ್ನು ಕೈಬಿಡಲಾಗಿದ್ದು, ಎರಡು ದಿನದೊಳಗೆ ಅಭ್ಯರ್ಥಿಯ ಕ್ರಿಮಿನಲ್ ಮಾಹಿತಿಯನ್ನು ಪ್ರಕಟಿಸಬೇಕು ಎಂದು ತಿಳಿಸಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ರಾಜಕೀಯ ಪಕ್ಷಗಳು ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳ ಕ್ರಿಮಿನಲ್ ಕೇಸ್ಗಳ ಮಾಹಿತಿಯನ್ನ ಪ್ರಕಟಿಸಿಲ್ಲ. ಈ ಮೂಲಕ 2020, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ನಲ್ಲಿ ದೂರು ದಾಖಲಾಗಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನಗಳನ್ನ ಹೊರಡಿಸಿದೆ. ಇದರ ಜೊತೆಗೆ, ಇನ್ನೂ ಕೆಲ ಹೊಸ ನಿರ್ದೇಶನಗಳನ್ನ ನೀಡಿರುವುದು ತಿಳಿದುಬಂದಿದೆ.
ರಾಜಕೀಯ ಪಕ್ಷಗಳು ಒಂದು ವೇಳೆ ಅಪರಾಧ ಹಿನ್ನೆಲೆ ಇರುವ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದರೆ ಅದಕ್ಕೆ ಕಾರಣ ನೀಡಬೇಕು. ಇಂಥ ಅಭ್ಯರ್ಥಿಯ ಕ್ರಿಮಿನಲ್ ಕೇಸ್ಗಳ ಮಾಹಿತಿ ಹಾಗೂ ಅವರನ್ನ ಯಾಕೆ ಆರಿಸಲಾಯಿತು ಎಂಬ ಸಕಾರಣ ವಿವರವನ್ನ ಪಕ್ಷದ ವೆಬ್ ಸೈಟ್ಗಳಲ್ಲಿ ಪ್ರಕಟಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 28,204 ಮಂದಿಗೆ ಸೋಂಕು: 147 ದಿನ ಕನಿಷ್ಠಕ್ಕೆ ಕುಸಿದ ಕೊರೊನಾ!