Publish Date: Wed, 09 Feb 2022 (07:06 IST)
Updated Date: Wed, 09 Feb 2022 (07:46 IST)
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಇಳಿಮುಖವಾಗಿವೆ.
ಇಂದು ಕೇವಲ 4,452 ಕೇಸ್ ಅಷ್ಟೇ ಬಂದಿವೆ. 51 ಮಂದಿ ಸೋಂಕಿಗೆ ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ 2,139 ಕೇಸ್ ವರದಿ ಆಗಿವೆ.
ಸೋಂಕಿನಿಂದ ಗುಣಮುಖರಾಗಿ ಇಂದು 19,067 ಮಂದಿ ಸೇರಿದಂತೆ ಒಟ್ಟು 37,94,866 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 72,414 ಸಕ್ರಿಯ ಪ್ರಕರಣಗಳಿವೆ. ಸೋಂಕಿನಿಂದಾಗಿ ಇದುವರೆಗೆ 39,447 ಮಂದಿ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 39,06,761 ಕ್ಕೆ ಏರಿದೆ. ಸೋಂಕಿತರ ಸಂಖ್ಯೆ ಶೇಕಡಾವಾರು 5.01 ಇದೆ. ಮೃತರ ಸಂಖ್ಯೆ ಶೇ.1.14 ಇದೆ. ಇಂದು 31,514 ಮಂದಿಗೆ ರ್ಯಾಪಿಡ್ ಹಾಗೂ 57,283 ಮಂದಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದೆ. 1,33,102 ಮಂದಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.