ನವದೆಹಲಿ : “ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯ ಚುರುಕಾಗಿ ಸಾಗುತ್ತಿದೆ. ಅಲ್ಪಾವಧಿಯಲ್ಲೇ ಈ ಬೃಹತ್ ದೇಗುಲದ ಅಡಿಪಾಯ ಹಾಕಲಾಗಿದೆ.
ಇನ್ನು, ದೇಗುಲದ ಸುತ್ತಲೂ ನಿರ್ಮಿಸಲಾಗುವ ರಾಮಮಂದಿರ ಧಾಮದ ಮಾಸ್ಟರ್ ಪ್ಲಾನ್ ಸಿದ್ಧವಾಗಿದ್ದು, ಸದ್ಯದಲ್ಲೇ ಅದರ ನಿರ್ಮಾಣಕ್ಕೂ ಚಾಲನೆ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದು, ಈ ಮೊದಲೇ ನಿರೀಕ್ಷಿಸಿದಂತೆ 2023ರಲ್ಲಿ ಶ್ರೀರಾಮನ ದರ್ಶನ ಭಾಗ್ಯವು ಭಕ್ತಾದಿಗಳಿಗೆ ಸಿಗುವುದರಲ್ಲಿ ಸಂಶಯವಿಲ್ಲ ಎಂದು ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಗುಲಾಬಿ ಬಣ್ಣದ ಕಲ್ಲುಗಳ ಬಳಕೆ:
ರಾಮಮಂದಿರ ನಿರ್ಮಾಣಕ್ಕೆ ರಾಜಸ್ಥಾನದ ಗುಲಾಬಿ ಬಣ್ಣದ ಕಲ್ಲುಗಳನ್ನು ಬಳಸಲಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ. ಇನ್ನು, ದೇಗುಲದ ಪ್ರಾಂಗಣದಲ್ಲಿ ಒಂದು ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಗೋಶಾಲೆ ಹಾಗೂ ಯಜ್ಞ ಶಾಲೆಗಳನ್ನು ನಿರ್ಮಿಸಲಾಗುತ್ತದೆ ಎಂದು ಟ್ರಸ್ಟ್ ಹೇಳಿದೆ. ಇದರ ಜೊತೆಯಲ್ಲೇ, ದೇಗುಲ ನಿರ್ಮಾಣ ಜಾಗದಲ್ಲಿರುವ ಕುಬೇರ ತಿಲ ಮತ್ತು ಸೀತಾ ಕೂಪ್ಗ್ಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ತಿಳಿಸಿದರು.