Select Your Language

Notifications

webdunia
webdunia
webdunia
webdunia

ಸಿಎಂ ಹುದ್ದೆಗೆ ಶಿವಕುಮಾರ್ ಪಟ್ಟು

ಸಿಎಂ ಹುದ್ದೆಗೆ ಶಿವಕುಮಾರ್ ಪಟ್ಟು
ಬೆಂಗಳೂರು , ಸೋಮವಾರ, 15 ಮೇ 2023 (10:28 IST)
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನನ್ನ ಶ್ರಮ ಎಲ್ಲರಿಗೂ ಗೊತ್ತಿದೆ. ಅಲ್ಲದೆ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವ ಪದ್ಧತಿಯಿದೆ. ಅದರಂತೆ ನನ್ನನ್ನು ಮುಖ್ಯಮಂತ್ರಿ ಮಾಡುವುದು ಸರಿಯಾದ ನಿರ್ಧಾರ. 

ಕಾಂಗ್ರೆಸ್ ಕಷ್ಟ ಅನುಭವಿಸುವಾಗ ಎಲ್ಲರೂ ಪಕ್ಷವನ್ನು ಕೈ ಬಿಟ್ಟು ನಡೆದರು. ಆಗ ನಾನು ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಮುನ್ನೆಡೆಸಿಕೊಂಡು ಹೋಗಿದ್ದೇನೆ. ಅಲ್ಲದೇ ಭಾರತ್ ಜೋಡೋ, ಮೇಕೆ ದಾಟು ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳಿಗೆ ನನ್ನ ಕೈಯಿಂದ ಹಣ ಹಾಕಿ ಯಶಸ್ವಿ ಮಾಡಿದ್ದೇನೆ.

ಚುನಾವಣೆಯಲ್ಲಿ ಅಭ್ಯರ್ಥಿಗಳ ಆರ್ಥಿಕ ಸಂಕಷ್ಟ ನೋಡಿ ಏನು ಮಾಡಬೇಕೋ ಅದನ್ನ ಮಾಡಿದ್ದೇನೆ. ಐಟಿ, ಇಡಿ ಹಾಗೂ ಸಿಬಿಐ ಸಂಕಷ್ಟದ ನಡುವೆ ಪಕ್ಷದ ಅಭ್ಯರ್ಥಿಗಳಿಗೆ ಹಣ ಹೊಂದಿಸಿ ಕೊಡಲು ನನ್ನ ವೈಯುಕ್ತಿಕ ಆಸ್ತಿಗಳನ್ನು ಅಡವಿಟ್ಟಿದ್ದೇನೆ. ನಾನು ಅಷ್ಟೆಲ್ಲ ಶ್ರಮಪಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ತೊರೆದಿದ್ದರ ಫಲವಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ನನ್ನ ಶ್ರಮಕ್ಕೆ ಪ್ರತಿ ಫಲ ಕೇಳುತ್ತಿದ್ದೇನೆ ಅಷ್ಟೇ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಶ್ರಮಕ್ಕೆ ಫಲ ಕೇಳುತ್ತಿದ್ದೇನೆ ಅಷ್ಟೇ : ಶಿವಕುಮಾರ್