Publish Date: Sun, 14 May 2023 (13:37 IST)
Updated Date: Sun, 14 May 2023 (12:39 IST)
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಇಂದು ಆದಿಚುಂಚನಗಿರಿ ಮಠಕ್ಕೆ ಮಂಡ್ಯ ಕಾಂಗ್ರೆಸ್ ಶಾಸಕ ಭೇಟಿ ನೀಡಿದರು. ಪೂಜೆ ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.
ಮಾತುಕತೆ ವೇಳೆ ಮಂಡ್ಯ ಶಾಸಕ ರವಿಕುಮಾರ್ ಶರ್ಟ್ ಬಟನ್ ಹಾಕಿಲ್ಲದಿರುವುದನ್ನು ಶ್ರೀಗಳು ಗಮನಿಸಿದರು. ಶರ್ಟ್ ಬಟನ್ ಹಾಕುವಂತೆ ಸೂಚಿಸಿ ಕಾಂಗ್ರೆಸ್ ಶಾಸಕನಿಗೆ ಶಿಸ್ತಿನ ಪಾಠ ಹೇಳಿದರು.
ನೀನಿಗ ಶಾಸಕ, ಹೀಗೆಲ್ಲ ಓಡಾಡಬಾರದು. ಮೊದಲು ಶರ್ಟ್ ಬಟನ್ ಹಾಕಿ ಎಂದು ತಿಳಿಸಿದರು. ಶ್ರೀಗಳ ಶಿಸ್ತಿನ ಪಾಠದ ಬೆನ್ನಲ್ಲೇ ಎಚ್ಚೆತ್ತು ಶಾಸಕ ಗಣಿಗ ರವಿಕುಮಾರ್ ಶರ್ಟ್ ಬಟನ್ ಹಾಕಿಕೊಂಡರು.