Select Your Language

Notifications

webdunia
webdunia
webdunia
webdunia

ಶರ್ಟ್ ಬಟನ್ ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ : ನಿರ್ಮಲಾನಂದನಾಥ ಸ್ವಾಮೀಜಿ

ಶರ್ಟ್ ಬಟನ್ ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ : ನಿರ್ಮಲಾನಂದನಾಥ ಸ್ವಾಮೀಜಿ
ಮಂಡ್ಯ , ಭಾನುವಾರ, 14 ಮೇ 2023 (10:33 IST)
ಮಂಡ್ಯ : ಶರ್ಟ್ ಬಟನ್ ಹಾಕಿ ಶಿಸ್ತಿನಿಂದ ನಡೆದುಕೊಳ್ಳಿ ಎಂದು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಶಾಸಕರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಶಿಸ್ತಿನ ಪಾಠ ಹೇಳಿದರು.
 
ಮಾತುಕತೆ ವೇಳೆ ಮಂಡ್ಯ ಶಾಸಕ ರವಿಕುಮಾರ್ ಶರ್ಟ್ ಬಟನ್ ಹಾಕಿಲ್ಲದಿರುವುದನ್ನು ಶ್ರೀಗಳು ಗಮನಿಸಿದರು. ಶರ್ಟ್ ಬಟನ್ ಹಾಕುವಂತೆ ಸೂಚಿಸಿ ಕಾಂಗ್ರೆಸ್ ಶಾಸಕನಿಗೆ ಶಿಸ್ತಿನ ಪಾಠ ಹೇಳಿದರು.

ನೀನಿಗ ಶಾಸಕ, ಹೀಗೆಲ್ಲ ಓಡಾಡಬಾರದು. ಮೊದಲು ಶರ್ಟ್ ಬಟನ್ ಹಾಕಿ ಎಂದು ತಿಳಿಸಿದರು. ಶ್ರೀಗಳ ಶಿಸ್ತಿನ ಪಾಠದ ಬೆನ್ನಲ್ಲೇ ಎಚ್ಚೆತ್ತು ಶಾಸಕ ಗಣಿಗ ರವಿಕುಮಾರ್ ಶರ್ಟ್ ಬಟನ್ ಹಾಕಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಸವರಾಜ ಬೊಮ್ಮಾಯಿ