Select Your Language

Notifications

webdunia
webdunia
webdunia
webdunia

ಬ್ಯಾಂಕಿಂಗ್ ಸಮಸ್ಯೆ ಚರ್ಚಿಸಿದ ಸೀತಾರಾಮನ್

ಬ್ಯಾಂಕಿಂಗ್ ಸಮಸ್ಯೆ ಚರ್ಚಿಸಿದ ಸೀತಾರಾಮನ್
ನವದೆಹಲಿ , ಶುಕ್ರವಾರ, 25 ಫೆಬ್ರವರಿ 2022 (14:53 IST)
ನವದೆಹಲಿ : ಪ್ರಯಾಣ, ಪ್ರವಾಸೋದ್ಯಮ ಹಾಗೂ ಆತಿಥ್ಯ ವ್ಯವಹಾರಗಳ ಮೇಲೆ ಕೋವಿಡ್-19 ಪ್ರಭಾವವನ್ನು ಅನುಸರಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಯಮ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಬ್ಯಾಂಕಿಂಗ್ ಸಂಬಂಧಿತ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಕೋವಿಡ್-19 ಹಾವಳಿಯಿಂದ ಅನೇಕ ಆತಿಥ್ಯ ಕ್ಷೇತ್ರಗಳಿಗೆ ಭಾರೀ ಹೊಡೆತ ಉಂಟಾಗಿದೆ.

ಕೇಂದ್ರ ಬಜೆಟ್ 2022-23ರಲ್ಲಿ ಹಣಕಾಸು ಸಚಿವೆ ಆತಿಥ್ಯ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲವನ್ನು ನೀಡಿದ್ದಾರೆ. ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್(ಇಸಿಎಲ್ಜಿ ಎಸ್) ಅಡಿಯಲ್ಲಿ ಹೆಚ್ಚುವರಿ 50 ಸಾವಿರ ರೂ. ವಿಂಡೋವನ್ನು ತೆರೆಯುವ ಯೋಜನೆಯನ್ನು ಘೋಷಿಸಲಾಗಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!

ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್, ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್, ಹಣಕಾಸು ಸೇವೆ, ಆರ್ಥಿಕ ವ್ಯವಹಾರ ಹಾಗೂ ಕಂದಾಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಿಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ : ಪ್ರಿಯಾಂಕಾ