Select Your Language

Notifications

webdunia
webdunia
webdunia
webdunia

ಸಿಎಂ ಕುಮಾರಸ್ವಾಮಿ ಕನಸಿಗೆ ಮಾಜಿ ಸಿಎಂ ಸಿದ್ದು ಗುದ್ದು?!

ಸಿಎಂ ಕುಮಾರಸ್ವಾಮಿ ಕನಸಿಗೆ ಮಾಜಿ ಸಿಎಂ ಸಿದ್ದು ಗುದ್ದು?!
ಬೆಂಗಳೂರು , ಸೋಮವಾರ, 18 ಜೂನ್ 2018 (09:05 IST)
ಬೆಂಗಳೂರು: ಹೊಸದಾಗಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಹೊಸ ಬಜೆಟ್ ಮಂಡನೆ ಮಾಡಬಹುದೆಂಬ ಲೆಕ್ಕಾಚಾರದಲ್ಲಿರುವ ಸಿಎಂ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಗುದ್ದು ಕೊಟ್ಟಿದ್ದಾರೆ.

ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಎಚ್ ಡಿಕೆ ಬಜೆಟ್ ಮಂಡನೆ ಪ್ರಸ್ತಾಪಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಸ್ವರ ಎತ್ತಿದ್ದಾರೆ ಎನ್ನಲಾಗಿದೆ. ತಮ್ಮ ಸರ್ಕಾರ ಇತ್ತೀಚೆಗಷ್ಟೇ ಮಂಡಿಸಿದ್ದ ಬಜೆಟ್ ನ ಅಂಶಗಳೇ ಇನ್ನೂ ಅನುಷ್ಠಾನವಾಗಿಲ್ಲ. ಹಾಗಾಗಿ ಈಗ ಪೂರ್ಣ ಪ್ರಮಾಣದ ಬಜೆಟ್ ಬೇಡ ಎಂದು ಸಿದ್ದರಾಮಯ್ಯ ತಕರಾರು ತೆಗೆದಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ರೈತರ ಸಂಪೂರ್ಣ ಸಾಲಮನ್ನಾ ವಿಚಾರಕ್ಕೂ ಸಿದ್ದರಾಮಯ್ಯ ಅಪಸ್ವರವೆತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಇದೀಗ ಬಜೆಟ್ ಮಂಡನೆ ವಿಚಾರ ದೋಸ್ತಿ ಪಕ್ಷಗಳ ನಡುವೆ ಅಸಮಾಧಾನದ ಕಿಡಿ ಹೊತ್ತಿಸುವ ಲಕ್ಷಣ ಕಾಣುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ನಿತಿನ್ ಗಡ್ಕರಿ ಜತೆ ಸಿಎಂ ಎಚ್ ಡಿಕೆ ಇಂದು ಮಹತ್ವದ ಮೀಟಿಂಗ್