Publish Date: Sun, 17 Jun 2018 (10:58 IST)
Updated Date: Sun, 17 Jun 2018 (11:00 IST)
ಬೆಂಗಳೂರು: ಕೆಲವರು ನಾನು ಈ ರಾಜ್ಯದ ಸೂಪರ್ ಸಿಎಂ ಎಂದು ಪುಕ್ಸಟೆ ಪ್ರಚಾರ ಕೊಡ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಕುಮಾರಸ್ವಾಮಿಯವರಿಗಿಂತ ಹೆಚ್ಚು ಎಚ್ ಡಿ ರೇವಣ್ಣರೇ ವಿವಿಧ ಇಲಾಖೆಗಳ ಕೆಲಸದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಆರೋಪಗಳಿವೆ. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರಿದ್ದರೂ ರೇವಣ್ಣರ ಮಾತೇ ನಡೆಯೋದು, ಅವರೇ ಸೂಪರ್ ಸಿಎಂ ಎಂದು ಸುಮ್ಮನೇ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ನಾನು ಲೋಕೋಪಯೋಗಿ ಇಲಾಖೆ ಬಿಟ್ಟು, ಬೇರೆ ಇಲಾಖೆಗಳ ಕೆಲಸ ಮಾಡುತ್ತಿಲ್ಲ. ಇದೆಲ್ಲಾ ಸುಮ್ಮನೇ ಹಬ್ಬಿರುವ ವದಂತಿಯಷ್ಟೇ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Sun, 17 Jun 2018 (10:58 IST)
Updated Date: Sun, 17 Jun 2018 (11:00 IST)