Publish Date: Fri, 15 Jun 2018 (09:49 IST)
Updated Date: Fri, 15 Jun 2018 (09:50 IST)
ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕವೂ ಟೆಂಪಲ್ ರನ್ ಮುಂದುವರಿಸಿರುವ ಎಚ್ ಡಿ ಕುಮಾರಸ್ವಾಮಿ ಇಂದು ಮಧುರೈಗೆ ಭೇಟಿ ನೀಡಲಿದ್ದಾರೆ.
ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಾಲಯಕ್ಕೆ ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಸಿಎಂ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೊನ್ನೆಯಷ್ಟೇ ಕಾಳಭೈರವೇಶ್ವರ ದೇವಾಲಯಕ್ಕೆ ಭೇಟಿ ಮಾಡಿ ಸಿಎಂ ಪೂಜೆ ಸಲ್ಲಿಸಿದ್ದರು.
ಮಧ್ಯಾಹ್ನ ಎಚ್ ಎಎಲ್ ವಿಮಾನ ನಿಲ್ದಾಣದ ಮೂಲಕ ಮಧುರೈಗೆ ತೆರಳಲಿರುವ ಸಿಎಂ ಎಚ್ ಡಿಕೆ ನಂತರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.