ಬೆಂಗಳೂರು: ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಯ ಅವಸ್ಥೆ ಹೇಳತೀರದಂತಾಗಿದೆ. ರಸ್ತೆಗೆ ಗುಡ್ಡ ಕುಸಿದು ಮೊನ್ನೆಯಿಡೀ ವಾಹನ ಸಂಚಾರರು ರಾತ್ರಿಯಿಡೀ ಪಡಬಾರದ ಪಾಡು ಪಟ್ಟ ಬೆನ್ನಲ್ಲೇ ಮತ್ತಷ್ಟು ಭೂಕುಸಿತವಾದ ವರದಿಯಾಗಿದೆ.
									
			
			 
 			
 
 			
					
			        							
								
																	ಮಂಗಳೂರು ಮತ್ತು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ 4 ತಿರುವುಗಳಲ್ಲಿ ಮತ್ತೆ ಭೂ ಕುಸಿತವಾಗಿದೆ.  6 ನೇ ತಿರುವಿನಲ್ಲಿ ರಸ್ತೆಯ ಕೆಳಭಾಗ ಕುಸಿಯಲು ಆರಂಭವಾಗಿದ್ದು, ಇದಾದರೆ ಇಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ.
									
										
								
																	ಈಗಾಗಲೇ ಮಂಗಳೂರು, ಧರ್ಮಸ್ಥಳ ಮುಂತಾದ ಕಡೆಗೆ ಬೆಂಗಳೂರಿನಿಂದ ಸಂಚರಿಸುವ ಬಸ್ ಗಳು ಬದಲಿ ಮಾರ್ಗವಾಗಿ ಸಂಚರಿಸುತ್ತಿವೆ. ಮತ್ತೆ ಭೂಕುಸಿತವಾದರೆ ಪ್ರಯಾಣಿಕರು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಮೊನ್ನೆ ಹಾನಿಗೀಡಾದ ರಸ್ತೆಯೇ ಇನ್ನೂ ದುರಸ್ಥಿಯಾಗಿಲ್ಲ.
									
											
							                     
							
							
			        							
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.