ಬಗ್ದಾದ್ : ಇರಾಕ್ನಲ್ಲಿ ಸೋಮವಾರ ಪ್ರಾರಂಭವಾದ ಮರಳಿನ ಬಿರುಗಾಳಿಯಿಂದಾಗಿ ಬರೋಬ್ಬರಿ 4,000 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
									
			
			 
 			
 
 			
					
			        							
								
																	ಏಪ್ರಿಲ್ ಮಧ್ಯಭಾಗದ ಬಳಿಕ ಇರಾಕ್ನಲ್ಲಿ ಅಪ್ಪಳಿಸಿದ 8ನೇ ಧೂಳಿನ ಬಿರುಗಾಳಿ ಇದಾಗಿದ್ದು, ರೋಗಿಗಳು ಉಸಿರಾಟದ ತೊಂದರೆಯಿಂದ ಆಸ್ಪತ್ರೆ ದಾಖಲಾಗುತ್ತಿದ್ದಾರೆ.
									
										
								
																	ಇರಾಕ್ ದೇಶದಲ್ಲಿ ತೀವ್ರವಾದ ಬರ, ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕಡಿಮೆ ಮಳೆಯ ಕಾರಣದಿಂದಾಗಿ ತೀವ್ರವಾದ ಮರಳಿನ ಬಿರುಗಾಳಿ ಏಳುತ್ತಿದೆ. ಮೇ ತಿಂಗಳ ಆರಂಭದಲ್ಲಿ ಇರಾಕ್ನಲ್ಲಿ ಇದೇ ರೀತಿ ಮರಳಿನ ಬಿರುಗಾಳಿ ಎದ್ದಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಸುಮಾರು 5,000 ಜನರು ಆಸ್ಪತ್ರೆಗೆ ದಾಖಲಾಗಿದ್ದರು. 
									
											
							                     
							
							
			        							
								
																	ಸೋಮವಾರ ಪ್ರಾರಂಭವಾದ ಬಿರುಗಾಳಿಯಿಂದಾಗಿ ಅಲ್ಲಿನ ಜನರಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ. ಮುಂಜಾಗೃತಾ ಕ್ರಮವಾಗಿ ಅಲ್ಲಿನ ವಿಮಾನ ನಿಲ್ದಾಣಗಳು, ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ.