ಬಾಗ್ದಾದ್ : ಇರಾಕ್ ಪ್ರಧಾನಿ ಮುಸ್ತಾಫಾ ಅಲ್-ಕಧಿಮಿ ಅವರ ನಿವಾಸಕ್ಕೆ ಭಾನುವಾರ ಮುಂಜಾನೆ ಸ್ಫೋಟಕಗಳನ್ನು ಹೊತ್ತ ಡ್ರೋನ್ ಒಂದು ನುಗ್ಗಿದೆ.
ಇದು ಹತ್ಯೆಯ ಪ್ರಯತ್ನ ಎಂದು ಇರಾಕ್ ಸೇನಾ ಪಡೆ ಹೇಳಿದೆ. ಕಧಿಮಿ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ದಾಳಿಯಲ್ಲಿ ಕಧಿಮಿ ಅವರ ಖಾಸಗಿ ಅಂಗರಕ್ಷಕ ಪಡೆಯಲ್ಲಿನ ಅನೇಕರಿಗೆ ಈ ದಾಳಿಯಿಂದ ಗಾಯಗಳಾಗಿವೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ವಿರುದ್ಧ ಇರಾಕ್ ರಾಜಧಾನಿಯಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಅದರ ಬಳಿಕ ಈ ದಾಳಿ ಪ್ರಯತ್ನ ನಡೆದಿದೆ.