Select Your Language

Notifications

webdunia
webdunia
webdunia
webdunia

SBI ಬ್ಯಾಂಕ್ ಅಲರ್ಟ್; ಆ.6 ಮತ್ತು 7ಕ್ಕೆ ನೆಟ್ಬ್ಯಾಕಿಂಗ್, ಮೊಬೈಲ್ ಆ್ಯಪ್ ಸೇವೆ ಸ್ಥಗಿತ!

SBI ಬ್ಯಾಂಕ್ ಅಲರ್ಟ್; ಆ.6 ಮತ್ತು 7ಕ್ಕೆ ನೆಟ್ಬ್ಯಾಕಿಂಗ್, ಮೊಬೈಲ್ ಆ್ಯಪ್ ಸೇವೆ ಸ್ಥಗಿತ!
ನವದೆಹಲಿ , ಶುಕ್ರವಾರ, 6 ಆಗಸ್ಟ್ 2021 (09:55 IST)
ನವದೆಹಲಿ(ಆ.06): ಇತ್ತೀಚೆಗೆ ಪ್ರಧಾನಿ ಮೋದಿ e-Rupi ಪಾವತಿ ವ್ಯವಸ್ಥೆಯನ್ನೂ ಜಾರಿಗೊಳಿಸಿದ್ದಾರೆ. ಇದೀಗ ಭಾರತದ ಭಾಗಶಃ ಡಿಜಿಟಲೀಕರಣಗೊಂಡಿದೆ. ಅದರಲ್ಲೂ ಬ್ಯಾಕಿಂಗ್ ಕೆಲಸಗಳು ಮೊಬೈಲ್ ಮೂಲಕವೇ ನಡೆಯುತ್ತಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅಲರ್ಟ್ ನೀಡಿದೆ. ನೆಟ್ಬ್ಯಾಕಿಂಗ್ ಸೇರಿದಂತೆ ಕೆಲ ಸೇವೆಗಳು ವ್ಯತ್ಯಯವಾಗಲಿದೆ ಎಂದು SBI ಹೇಳಿದೆ.

ಆಗಸ್ಟ್ 6 ಮತ್ತು 7 ರಂದು ಕೆಲ ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೆಟ್ಬ್ಯಾಕಿಂಗ್,ಯೋನೋ(YONO),ಯೋನೋ ಲೈಟ್(YONO Lite), ಯೋನೋ ಬಿಸ್ನೆಸ್(YONO Business)ಸೇವೆ ಸ್ಥಗಿತಗೊಳ್ಳಲಿದೆ ಎಂದು ಎಸ್ಬಿಐ ಹೇಳಿದೆ.
ಆಗಸ್ಟ್ 6 ರಂದು ರಾತ್ರಿ 10.45ರಿಂದ ಆಗಸ್ಟ್ 7ರ ಮುಂಜಾನೆ ಬೆಳಗ್ಗೆ 1.15ರ ವರೆಗೆ ನಿರ್ವಹಣೆ ನಡೆಯಲಿದೆ. ಒಟ್ಟು 150 ನಿಮಿಷಗಳ ಕಾಲ ಸೇವೆ ಸ್ಥಗಿತಗೊಳ್ಳಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಈ ಅಡಚಣೆಗೆ ಸಹಕರಿಸಬೇಕಾಗಿ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿದೆ.
ಜುಲೈ 16 ಮತ್ತು 17 ರಂದು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಬ್ಯಾಂಕಿಂಗ್ ಸೇವೆಯಲ್ಲಿ ಅಡಚಣೆಯಾಗಿತ್ತು. ಇದೀಗ ನಿರ್ವಹಣೆ ಕಾರಣಕ್ಕೆ ಸೇವೆಗಳು ಸ್ಥಗಿತಗೊಳ್ಳುತ್ತಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಮನೆ ಸಾಲಕ್ಕೆ ಮಾನ್ಸೂನ್ ಧಮಾಕ ಆಫರ್ ನೀಡಿತ್ತು. ಪ್ರೋಸೆಸಿಂಗ್ ಚಾರ್ಜ್  ಸಂಪೂರ್ಣ ಉಚಿತವಾಗಿರುವ ಈ ಲೋನ್ ಬೇಕಾದಲ್ಲಿ ಯೋನೋ ಆ್ಯಪ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮನೆ ಸಾಲಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!