Select Your Language

Notifications

webdunia
webdunia
webdunia
webdunia

ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ?

ಕರ್ನಾಟಕದಿಂದ ರಾಜ್ಯಸಭೆಗೆ ಮರು ಆಯ್ಕೆ?
ಬೆಂಗಳೂರು , ಗುರುವಾರ, 10 ಮಾರ್ಚ್ 2022 (07:48 IST)
ಬೆಂಗಳೂರು : ಕರ್ನಾಟಕ ಅದ್ಭುತ ರಾಜ್ಯ ಎಂದು ಬಣ್ಣಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರಾಜ್ಯದಿಂದ ಮರು ಆಯ್ಕೆ ಆಗುವ ಸುಳಿವು ನೀಡಿದ್ದಾರೆ.

ಕರ್ನಾಟಕದಿಂದ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಪಾದಕರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಭಾಗವಹಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ನಿಮ್ಮ ವೈಯುಕ್ತಿಕ ಆಯ್ಕೆ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏಕೆ ಆಗಬಾರದು? ಕರ್ನಾಟಕ ಅದ್ಭುತ ರಾಜ್ಯ. ಕರ್ನಾಟಕದ ಸೇವೆಯನ್ನು ಗೌರವದಿಂದ ಮಾಡುತ್ತೇನೆ.

ನಾನು ಸಂಸದೆ ಅನ್ನೋ ಕಾರಣಕ್ಕಾಗಿ ಅಲ್ಲ. ಕರ್ನಾಟಕದ ಬಗ್ಗೆ ಅಪಾರ ಅಭಿಮಾನವಿದೆ. ಕರ್ನಾಟಕ ಒಳ್ಳೆಯ ಕಾರ್ಯಗಳ ಮೇಲೆ ನಿಂತಿದೆ ಅಂತೇಳಿ ಮರು ಆಯ್ಕೆಯ ಬಗ್ಗೆ ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕ ಅಧ್ಯಕ್ಷರ ಫೋನ್‌ಗೂ ಕ್ಯಾರೆ ಮಾಡದ ಸೌದಿ ಅರೇಬಿಯಾ!