Select Your Language

Notifications

webdunia
webdunia
webdunia
webdunia

ರಾಜ್ಯಸಭಾ ಚುನಾವಣೆ ಡೇಟ್ ಫಿಕ್ಸ್?

ರಾಜ್ಯಸಭಾ ಚುನಾವಣೆ  ಡೇಟ್ ಫಿಕ್ಸ್?
ನವದೆಹಲಿ , ಮಂಗಳವಾರ, 8 ಮಾರ್ಚ್ 2022 (07:38 IST)
ನವದೆಹಲಿ : ರಾಜ್ಯಸಭಾದ 13 ಸ್ಥಾನಗಳಿಗೆ ಏಪ್ರಿಲ್ 31ರಂದು ಚುನಾವಣೆ ನಿಗದಿಪಡಿಸಲಾಗಿದೆ ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.

ಒಟ್ಟು 6 ರಾಜ್ಯಗಳಿಂದ 13 ಸ್ಥಾನಗಳಿಗೆ ಅಂದು ಚುನಾವಣೆ ನಡೆಯಲಿದೆ. ಪಂಜಾಬ್ನಲ್ಲಿ 5, ಕೇರಳದಲ್ಲಿ 3, ಅಸ್ಸಾಂನಲ್ಲಿ 2 ಹಾಗೂ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ತ್ರಿಪುರ ರಾಜ್ಯಗಳಲ್ಲಿ ತಲಾ ಒಂದು ಸ್ಥಾನ ಖಾಲಿ ಉಳಿದಿವೆ. 

ರಾಜ್ಯಸಭಾ ಸದಸ್ಯರಾದ ಸುಖ್ದೇವ್ ಸಿಂಗ್, ಪ್ರತಾಪ್ ಸಿಂಗ್ ಬಜ್ವಾ, ಸ್ವೈತ್ ಮಲಿಕ್, ನರೇಶ್ ಗುಜ್ರಾಲ್, ಶ್ಯಾಮ್ಶೇಖರ್ ಸಿಂಗ್ ಡಲ್ಲೋ, ಎ.ಕೆ.ಆಂಟೊಣಿ, ಎಂ.ವಿ.ಶ್ರೇಯಮ್ಸ್ ಕುಮಾರ್, ಕೆ.ಸೋಮಪ್ರಸಾದ್, ಕೆ.ರಾಣೇ ನರೇಶ್, ರಿಪುನ್ ಬೋರಾ, ಆನಂದ್ ಶರ್ಮಾ, ಕೆ.ಜಿ.ಕೆನ್ಯೆ, ಸ್ಮಿತ್ ಝರ್ನ ದಾಸ್ ಅವರ ಅವಧಿ ಏಪ್ರಿಲ್ ತಿಂಗಳಲ್ಲಿ ಮುಗಿಯಲಿದೆ.

ರಾಜ್ಯಸಭೆಯ ಸ್ಥಾನಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿವೆ. ಲೋಕಸಭೆ ಮತ್ತು ರಾಜ್ಯಸಭೆಯ ಒಟ್ಟು 776 ಸಂಸದರು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,120 ಶಾಸಕರು ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡುತ್ತಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ