Select Your Language

Notifications

webdunia
webdunia
webdunia
webdunia

ರಾಜ್ಯಸಭಾ ಸಂಸದರು ಅಮಾನತು!

ರಾಜ್ಯಸಭಾ ಸಂಸದರು ಅಮಾನತು!
ನವದೆಹಲಿ , ಮಂಗಳವಾರ, 26 ಜುಲೈ 2022 (15:32 IST)
ನವದೆಹಲಿ : ಮಂಗಳವಾರದ ರಾಜ್ಯಸಭಾ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆ 19 ವಿರೋಧಪಕ್ಷದ ಸಂಸದರನ್ನು ರಾಜ್ಯಸಭೆಯಿಂದ 1 ವಾರದವರೆಗೆ ಅಮಾನತುಗೊಳಿಸಲಾಗಿದೆ.

ಸೋಮವಾರವಷ್ಟೇ 4 ಕಾಂಗ್ರೆಸ್ ಸಂಸದರು ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದಕ್ಕಾಗಿ ಆಗಸ್ಟ್ 12ರ ವರೆಗೆ ಅಮಾನತುಗೊಂಡಿದ್ದರು. ಇದರ ಬೆನ್ನಲ್ಲೇ ಇಂದು 19 ಸಂಸದರನ್ನು ಅಮಾನತುಗೊಳಿಸಲಾಗಿದೆ.

ಇಂದು ಅಮಾನತುಗೊಂಡ ಸಂಸದರು ಸದನವನ್ನು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ 1 ಗಂಟೆಯ ಕಾಲ ಸದನವನ್ನು ಮುಂದೂಡಲಾಗಿತ್ತು.

ತೃಣಮೂಲ ಕಾಂಗ್ರೆಸ್ನ ಸುಶ್ಮಿತಾ ದೇವ್, ಮೌಸಮ್ ನೂರ್, ಶಾಂತಾ ಛೆಟ್ರಿ, ದೋಲಾ ಸೇನ್, ಸಂತಾನು ಸೇನ್, ಅಭಿ ರಂಜನ್ ಬಿಸ್ವರ್, ಎಂ.ಡಿ ನಾದಿಮುಲ್ ಹಕ್ ಅಮಾನತುಗೊಂಡಿದ್ದಾರೆ. 

ಟಿಆರ್ಎಸ್ನ ಎಂ ಹಮಮದ್ ಅಬ್ದುಲ್ಲಾ, ಡಿಎಂಕೆಯ ಎಸ್ ಕಲ್ಯಾಣಸುಂದರಂ, ಆರ್ ಗಿರಂಜನ್, ಎನ್.ಆರ್ ಇಲಾಂಗೋ, ಎಂ ಷಣ್ಮುಗಂ, ಕನಿಮೊಳಿ ಎನ್.ವಿ.ಎನ್ ಸೋಮು, ಸಿಪಿಐ ಪಕ್ಷ ಬಿ ಲಿಂಗಯ್ಯ ಯಾದವ್, ರವಿಹಂದ್ರ ವಡ್ಡಿರಾಜು, ದಾಮೋದರ ರಾವ್ ದಿವಕೊಂಡ – ಎ.ಎ ರಹೀಮ್, ವಿ ಶಿವದಾಸನ್, ಸಂತೋಷ್ ಕುಮಾರ್ ಪಿ ಅಮಾನತುಗೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

85 ಮಂದಿಗೆ ಇಲಿ ಜ್ವರ ಪತ್ತೆ: ಏನಿದು ಇಲಿ ಜ್ವರ?