Publish Date: Tue, 07 Aug 2018 (09:09 IST)
Updated Date: Tue, 07 Aug 2018 (09:10 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಸೇರ್ಪಡೆ ಬಗ್ಗೆ ಹಲವು ದಿನಗಳಿಂದ ಚರ್ಚೆಗಳು ನಡೆದೇ ಇತ್ತು. ಆದರೆ ಇದೀಗ ಸಚಿವ ಪಾಂಡ್ಯ ರಾಜನ್ ನೀಡಿದ ಸಂದರ್ಶನವೊಂದರಲ್ಲಿ ಹೊಸದೊಂದು ಗುಸು ಗುಸು ಶುರುವಾಗಿದೆ.
ತಮಿಳು ವಾಹಿನಿಯೊಂದಕ್ಕೆ ರಜನೀಕಾಂತ್ ಬಗ್ಗೆ ಪಾಂಡ್ಯ ರಾಜನ್ ನೀಡಿರುವ ಹೇಳಿಕೆ ರಜನಿ ಆಡಳಿತಾರೂಢ ಎಐಎಡಿಎಂಕೆ ಸೇರಬಹುದಾ ಎಂಬ ಚರ್ಚೆ ಶುರುವಾಗಿದೆ.
ರಜನೀಕಾಂತ್ ನಿಮ್ಮ ಪಕ್ಷದ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪಾಂಡ್ಯ ರಾಜನ್ ಅದು ಮೈತ್ರಿಕೂಟವೂ ಆಗಬಹುದು. ನಮ್ಮ ಪಕ್ಷಕ್ಕೆ ಸೇರ್ಪಡೆಯೂ ಆಗಬಹುದು ಎಂದಿದ್ದಾರೆ. ಈ ಮಾತು ಇದೀಗ ಹೊಸ ಸಂಚಲನ ಸೃಷ್ಟಿಸಿದ್ದು, ರಜನೀಕಾಂತ್ ಎಐಎಡಿಎಂಕೆ ಸೇರುತ್ತಾರೆ ಎಂಬ ವದಂತಿಗಳಿಗೆ ಪುಷ್ಠಿ ನೀಡಿದಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.