Publish Date: Wed, 15 Jun 2022 (08:05 IST)
Updated Date: Wed, 15 Jun 2022 (09:08 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ವರುಣನ ಆರ್ಭಟ ಜೋರಾಗಿದ್ದು, ಸಂಜೆಯಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ.
ಸಂಜೆ ಹೊತ್ತು ಏಕಾಏಕಿ ಪ್ರಾರಂಭವಾದ ಮಳೆ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ತೆರಳುವವರಿಗೆ ಕಿರಿಕಿರಿ ಉಂಟುಮಾಡಿದೆ.
ಮೆಜೆಸ್ಟಿಕ್, ಗಾಂಧೀನಗರ, ಚಾಮರಾಜಪೇಟೆ, ವಿಧಾನಸೌಧ, ಹಲಸೂರು, ಶೇಷಾದ್ರಿಪುರಂ, ಕೆಆರ್ ಸರ್ಕಲ್, ಕಾರ್ಪೋರೆಷನ್, ಶಿವಾನಂದ ಸರ್ಕಲ್ ಸೇರಿದಂತೆ ಹಲವೆಡೆ ಮಳೆ ಜೋರಾಗಿ ಸುರಿದಿದೆ.