Publish Date: Sat, 30 Jun 2018 (09:11 IST)
Updated Date: Sat, 30 Jun 2018 (09:14 IST)
ನವದೆಹಲಿ: ಕರ್ನಾಟಕ ಚುನಾವಣೆ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೈಲಾಶ್ ಮಾನಸ ಸರೋವರ ಯಾತ್ರೆ ಮಾಡಲು ಹೊರಟಿದ್ದರಾ? ಹೀಗೊಂದು ಅನುಮಾನಕ್ಕೆ ಇದೀಗ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಚೀನಾ ಗಡಿಯಲ್ಲಿರುವ ಮಾನಸ ಸರೋವರಕ್ಕೆ ಯಾತ್ರೆ ಮಾಡಲು ರಾಹುಲ್ ಗಾಂಧಿ ಬಯಸಿದ್ದರು. ಆದರೆ ವಿದೇಶಾಂಗ ಇಲಾಖೆಯಿಂದ ಒಪ್ಪಿಗೆ ಸಿಗಲಿಲ್ಲ ಎಂದು ಕೆಲವು ವದಂತಿಗಳು ಎದ್ದಿತ್ತು.
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ‘ರಾಹುಲ್ ಕಡೆಯಿಂದ ಇಲಾಖೆಗೆ ಇಂತಹ ಯಾವುದೇ ಅರ್ಜಿ ಬಂದಿಲ್ಲ. ಯಾರಿಗೇ ಆದರೂ ಇಲ್ಲಿಗೆ ಹೋಗಬೇಕಾದರೆ ಇಲಾಖೆಯ ವೆಬ್ ಸೈಟ್ ಮೂಲಕ ಮನವಿ ಅರ್ಜಿ ಸಲ್ಲಿಸಬೇಕು. ಆದರೆ ರಾಹುಲ್ ಇದುವರೆಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಇಲಾಖೆ ಅವರ ಮನವಿ ತಿರಸ್ಕರಿಸುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ಈ ಮೂಲಕ ರಾಹುಲ್ ಯಾತ್ರೆಯ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.