Select Your Language

Notifications

webdunia
webdunia
webdunia
webdunia

ರಾಜ್ಯವನ್ನು ಮೊದಲು ನಿಭಾಯಿಸಿ, ನಂತರ ಮಹಾಘಟಬಂಧನ್ ಮಾತು ಎಂದು ಅಮಿತ್ ಶಾ ಸವಾಲು ಹಾಕಿದ್ದು ಯಾರಿಗೆ?

ರಾಜ್ಯವನ್ನು ಮೊದಲು ನಿಭಾಯಿಸಿ, ನಂತರ ಮಹಾಘಟಬಂಧನ್ ಮಾತು ಎಂದು ಅಮಿತ್ ಶಾ ಸವಾಲು ಹಾಕಿದ್ದು ಯಾರಿಗೆ?
ನವದೆಹಲಿ , ಶನಿವಾರ, 30 ಜೂನ್ 2018 (09:08 IST)
ನವದೆಹಲಿ: ಮೊದಲು ನಿಮ್ಮ ರಾಜ್ಯವನ್ನು ಸರಿಯಾಗಿ ನಿಭಾಯಿಸಲು ಕಲಿಯಿರಿ. ನಂತರ ಮಹಾಘಟಬಂಧನದ ಬಗ್ಗೆ ಆಲೋಚನೆ ಮಾಡಿ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸವಾಲು ಹಾಕಿದ್ದಾರೆ.

ಪಶ್ಚಿಮ ಬಂಗಾಲದ ಲೋಕಸಭೆ ಚುನಾವಣೆ ಪೂರ್ವ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮಮತಾ ಬ್ಯಾನರ್ಜಿ ಈಗೀಗ ಮಹಾಘಟಬಂಧನ ಮಾಡಲು ಓಡಾಡುವುದೇ ಜಾಸ್ತಿಯಾಗಿದೆ. ಅವರನ್ನು ರಾಜ್ಯದಲ್ಲಿ ನೋಡುವುದೇ ಅಪರೂಪವಾಗಿದೆ.ಅದೆಲ್ಲಾ ಒಳ್ಳೆಯದೇ. ಆದರೆ ಅವರು ತನ್ನ ರಾಜ್ಯವನ್ನು ಮೊದಲು ನೋಡಿಕೊಳ್ಳಲಿ. ಬಹುಶಃ ಅವರಿಗೆ ಗೊತ್ತಿಲ್ಲ, ದೆಹಲಿಯನ್ನು ಟಾರ್ಗೆಟ್ ಮಾಡುವ ಭರದಲ್ಲಿ ತನ್ನದೇ ರಾಜ್ಯ ಕೈ ತಪ್ಪಿಹೋಗುತ್ತಿದೆ’ ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸೇರಲು ಬಿಎಸ್ ವೈಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಓಪನ್ ಆಫರ್