Select Your Language

Notifications

webdunia
webdunia
webdunia
webdunia

ಹುಲಿಯನ್ನು ಎದುರಿಸಲು ಕಾಗೆ, ಮಂಗ, ನರಿಗಳು ಒಂದಾಗುತ್ತಿವೆ: ಅನಂತಕುಮಾರ್ ಹೆಗ್ಡೆ

ಹುಲಿಯನ್ನು ಎದುರಿಸಲು ಕಾಗೆ, ಮಂಗ, ನರಿಗಳು ಒಂದಾಗುತ್ತಿವೆ: ಅನಂತಕುಮಾರ್ ಹೆಗ್ಡೆ
ಬೆಂಗಳೂರು , ಶುಕ್ರವಾರ, 29 ಜೂನ್ 2018 (15:52 IST)
ಮುಂಬರುವ 2019ರ ಚುನಾವಣೆಯಲ್ಲಿ ಹುಲಿಯನ್ನು ಎದುರಿಸಲು ಕಾಗೆ, ಮಂಗ ಮತ್ತು ನರಿಗಳು ಒಂದಾಗುತ್ತಿವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಕಾರವಾರದಲ್ಲಿ ಆಯೋಜಿಸಲಾದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಕಡೆ ಕಾಗೆ, ಮಂಗ ಮತ್ತು ನರಿಗಳು ಒಂದು ಕಡೆ ಸೇರಿದ್ದರೆ ಮತ್ತೊಂದು ಕಡೆ ಮುಂಬರುವ 2019ರ ಲೋಕಸಭೆ ಚುನಾವಣೆಯಲ್ಲಿ ಹುಲಿಯನ್ನು ಗೆಲ್ಲಿಸಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ದೇಶದ ಅಭಿವೃದ್ಧಿ ಕುಂಠಿತವಾಗಲು ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಿದೆ. ಇಂದು ನಾವು ಪ್ಲ್ಯಾಸ್ಟಿಕ್ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್ ನೇರ ಕಾರಣ. ಒಂದು ವೇಳೆ ನಾವೇನಾದರೂ 70 ವರ್ಷ ಅಡಳಿತ ನಡೆಸಿದ್ದಲ್ಲಿ ನೀವೆಲ್ಲಾ ಬೆಳ್ಳಿಯ ಖುರ್ಚಿಯಲ್ಲಿ ಕುಳಿತುಕೊಳ್ಳುತ್ತಿದ್ದೀರಿ ಎಂದು ಹೇಳಿದರು.
 
ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುವ ಹವ್ಯಾಸವಿರುವ ಸಂಸದ ಹೆಗಡೆ, ಕಳೆದ ವರ್ಷ ದಲಿತರನ್ನು ನಾಯಿಗಳಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದರು. ನಾಯಿಗಳು ರಸ್ತೆಯ ಮೇಲೆ ಬೊಗಳುತ್ತಿದ್ದರೆ ನಾವು ಕೇರ್ ಮಾಡಲ್ಲ ಎಂದು ಗುಡುಗಿದ್ದರು. 
 
ಕರ್ನಾಟಕ ಚುನಾವಣೆಗೆ ಮುನ್ನ, ಹೆಗ್ಡೆ ಫೆಬ್ರವರಿಯಲ್ಲಿ ಹೇಳಿದರು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜನತೆ ಗೌರವಾನ್ವಿತ ಕನ್ನಡವನ್ನು ಮಾತನಾಡುತ್ತಾರೆ. ಇತರರು ಕನ್ನಡವನ್ನ ಮಾತನಾಡುತ್ತಿಲ್ಲ. ಸರಿಯಾದ ಕನ್ನಡವನ್ನು ಹೇಗೆ ಮಾತನಾಡಬೇಕು ಎಂದು ಬೆಂಗಳೂರು ಮತ್ತು ಮೈಸೂರು ಜನರಿಗೂ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತ್ಸೆ ಪ್ರೀತ್ಸೆ ಬೆನ್ನು ಬಿದ್ದ ಯುವಕ; ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಯತ್ನ