Select Your Language

Notifications

webdunia
webdunia
webdunia
webdunia

ಪ್ರೀತ್ಸೆ ಪ್ರೀತ್ಸೆ ಬೆನ್ನು ಬಿದ್ದ ಯುವಕ; ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಯತ್ನ

ಪ್ರೀತ್ಸೆ ಪ್ರೀತ್ಸೆ ಬೆನ್ನು ಬಿದ್ದ ಯುವಕ; ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಯತ್ನ
ಚಾಮರಾಜನಗರ , ಶುಕ್ರವಾರ, 29 ಜೂನ್ 2018 (15:46 IST)
ಆಕೆ ಈಗಿನ್ನೂ ಜಗತ್ತನ್ನು ನೋಡಬೇಕಾದಳು. ಅಪ್ರಾಪ್ತ ಬಾಲಕಿ. ಆದರೆ ಪ್ರೀತ್ಸೆ ಪ್ರಿತ್ಸೆ ಅಂತ ಬೀದಿ ಕಾಮಣ್ಣನೊಬ್ಬ ಆಕೆಯ ಬೆನ್ನು ಬಿದ್ದಿದ್ದ. ಕಿರಾತಕ ಕೊಟ್ಟ ಕಿರುಕುಳ ತಾಳಲಾರದೇ ಆ ಅಪ್ರಾಪ್ತೆ ಆತ್ಮಹತ್ಯೆಗೆ ಯತ್ನಿಸಿ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. 
ಬೀದಿ ಕಾಮಣ್ಣನ ಕಿರುಕುಳಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದ ಪ್ರೀತಿ (15) ಸ್ಥಿತಿ ಗಂಭೀರವಾಗಿದೆ. ಗಾಯಾಳು ಪ್ರೀತಿಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪ್ರಾಪ್ತೆ ಬಾಲಕಿ ಪ್ರೀತಿಯನ್ನು ಪ್ರೀತ್ಸೆ ಅಂತ ಬೆನ್ನು ಹತ್ತಿದ್ದ ಆರೋಪಿ ಮನು ಎಂಬಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಚಾಮರಾಜನಗರದ ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಾಜ್ ಮಹಲ್ ಕಟ್ಟಡವನ್ನು ಕೆಡವಬೇಕು ಎಂದು ಅಜಂಖಾನ್ ಹೇಳಿದ್ಯಾಕೆ?