Publish Date: Tue, 17 Jul 2018 (09:05 IST)
Updated Date: Tue, 17 Jul 2018 (09:06 IST)
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವಿದ್ದಾಗ ಚಾಲನೆಗೊಂಡ ಅಗ್ಗದ ದರದ ಇಂದಿರಾ ಕ್ಯಾಂಟೀನ್ ನ ಮೆನುವಿನಲ್ಲಿ ಹೊಸದಾಗಿ ಒಂದು ಐಟಂ ಶುರುವಾಗಲಿದೆ.
ಇದುವರೆಗೆ ರೈಸ್ ಬಾತ್, ಪುಳಿಯೋಗರೆ, ಉಪ್ಪಿಟ್ಟು, ಇಡ್ಲಿ, ಮೊಸರನ್ನ ಮುಂತಾದ ತಿಂಡಿ ವಗೈರೆಗಳನ್ನು ಇಂದಿರಾ ಕ್ಯಾಂಟೀನ್ ನಲ್ಲಿ ಸವಿಯಬಹುದಿತ್ತು. ಇನ್ನು ಮುಂದೆ ರಾಗಿ ಮುದ್ದೆಯೂ ಮೆನುವಿಗೆ ಸೇರ್ಪಡೆಯಾಗಲಿದೆ.
ಮುದ್ದೆ ಪ್ರಿಯರಿಗೆ ಇದು ಶುಭ ಸುದ್ದಿಯೇ. ಆದರೆ ಈಗಲೇ ಪ್ರಾರಂಭವಾಗಲ್ಲ. ಮುಂದಿನ ತಿಂಗಳಿನಿಂದ ರಾಗಿ ಮುದ್ದೆ ಇಂದಿರಾ ಕ್ಯಾಂಟೀನ್ ಮೆನುವಿಗೆ ಹೊಸದಾಗಿ ಸೇರ್ಪಡೆಯಾಗಲಿದೆ. ಈಗಾಗಲೇ ಮುದ್ದೆ ತಯಾರಿಸಲು ಯಂತ್ರಗಳು ಕ್ಯಾಂಟೀನ್ ಅಡುಗೆ ಮನೆಗೆ ಬಂದಿದೆ. ಆಗಸ್ಟ್ ನಿಂದ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ರಾಗಿ ಮುದ್ದೆ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.