Select Your Language

Notifications

webdunia
webdunia
webdunia
webdunia

ರಾಯಬಾಗ್: ಕಾಂಗ್ರೆಸ್ ಪಕ್ಷದಲ್ಲಿ ಬುಗಿಲೆದ್ದ ಭಿನ್ನಮತ

ರಾಯಬಾಗ್: ಕಾಂಗ್ರೆಸ್ ಪಕ್ಷದಲ್ಲಿ ಬುಗಿಲೆದ್ದ ಭಿನ್ನಮತ
ಚಿಕ್ಕೋಡಿ , ಸೋಮವಾರ, 2 ಏಪ್ರಿಲ್ 2018 (16:24 IST)
ರಾಯಬಾಗ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಬುಗಿಲೆದ್ದಿದ್ದು, ಜಾರಕಿಹೊಳಿ ಸಹೋದರರ ಬಣಗಳು ತಮ್ಮ ಬೆಂಬಲಿಗರ ಪರವಾಗಿ ಟಿಕೆಟ್ ಫೈಟ್ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
ಇಬ್ಬರೂ ರಾಯಬಾಗ್ ಎಸ್ಸಿ ಮೀಸಲು ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಹಾವೀರ ಮೊಹಿತೆ, ಸುಕುಮಾರ ಕಿರಣಗಿ ಸತೀಶ ಜಾರಕಿಹೊಳಿ ಬಣದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬಣದಲ್ಲಿ ಅಪಸ್ವರ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 
 
ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಧ್ಯೆ ತೀವ್ರ ತೆರೆನಾದ ಬಿಕ್ಕಟ್ಟು ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿರುವ ಮಹಾವೀರ ಮೋಹಿತೆ ಪರ ಸತೀಶ್ ಜಾರಕಿಹೊಳಿ ಶಿಪಾರಸ್ಸು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 
ರಾಯಬಾಗ ಬ್ಲಾಕ್ ಕಾಂಗ್ರೆಸ್ ಮಾಡಿರುವ ಶಿಪಾರಸ್ಸು ಪರಿಶೀಲಿಸಿ ಟಿಕೆಟ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕೆಪಿಸಿಸಿಗೆ ಆಗ್ರಹಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದ ವೇಳೆ ಸಿಎಂಗೆ ಮುಜುಗರದ ಮೇಲೆ ಮುಜುಗರ