Publish Date: Mon, 02 Apr 2018 (16:07 IST)
Updated Date: Mon, 02 Apr 2018 (16:10 IST)
ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಂಬರೀಶ್, ಚುನಾವಣೆ ಸ್ಪರ್ಧೆ ಬಗ್ಗೆ ಇಂದು ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಈ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯರನ್ನು ತಮ್ಮ ನಿವಾಸಕ್ಕೆ ಇಂದು ರಾತ್ರಿ ಊಟಕ್ಕೆ ಕರೆದಿರುವ ಅಂಬಿ ಮಂಡ್ಯ ಜಿಲ್ಲೆಯ ಕೆಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರದಲ್ಲಿ ಸಿಎಂ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.
ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಕಾಂಗ್ರೆಸ್ ಬೆಂಬಲ ಕೊಟ್ಟಿರುವುದಕ್ಕೆ ಅಂಬಿ ಆಕ್ರೋಶ ವ್ಯಕ್ತಪಡಿಸಿದ್ದು 2009ರಲ್ಲಿ ಮಂಡ್ಯ ಸಂಸತ್ ಚುನಾವಣೆಯಲ್ಲಿ ಅಂಬರೀಶ್ ಸೋಲಲು ಕಾರಣವಾಗಿದ್ದ ದಿವಂಗತ ಪುಟ್ಟಣ್ಣಯ್ಯಪುಟ್ಟಣ್ಣಯ್ಯ ಸ್ಪರ್ಧೆಯಿಂದ ಅಂಬಿ ಸೋತಿದ್ದರು.
ಈ ಬಗ್ಗೆ ಪುಟ್ಟಣ್ಣಯ್ಯ ಜೊತೆಗೆ ಅಸಮಾಧಾನ ಹೊಂದಿದ್ದ ರೆಬಲ್ ಸ್ಟಾರ್, ತಮ್ಮ ಬೆಂಬಲಿಗ ಎಲ್.ಡಿ.ರವಿಗೆ ಟಿಕೆಟ್ ಕೊಡಿಸುವಂತೆ ಸಿಎಂಗೆ ಒತ್ತಡ ಹೆರುವ ಸಾಧ್ಯತೆಯಿದ್ದು, ಮದ್ದೂರಿನಿಂದ ಮಧು ಮಾದೇಗೌಡ, ಕೆ.ಆರ್.ಪೇಟೆಯಿಂದ ಕಿಕ್ಕೇರಿ ಸುರೇಶ್‌ಗೆ ಬಿ.ಫಾರಂ ಸಿಗುವಂತೆ ಸಿಎಂ ಗೆ ಅಂಬಿ ಪಟ್ಟು ಹಿಡಿಯುವ ಸಾಧ್ಯತೆಗಳಿವೆ ಎಂದು ಅಂಬರೀಶ್ ಆಪ್ತರಿಂದ ಈ ಬಗ್ಗೆ ಮಾಹಿತಿ ಹೊರಬಂದಿದೆ.
jagadish
Publish Date: Mon, 02 Apr 2018 (16:07 IST)
Updated Date: Mon, 02 Apr 2018 (16:10 IST)