Publish Date: Sun, 01 Apr 2018 (16:49 IST)
Updated Date: Sun, 01 Apr 2018 (16:51 IST)
ಜಿಲ್ಲೆಯ ಮಾಯಕೊಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್ ಬೇಡ.ಟಿಕೆಟ್ ಕೊಟ್ಡರೆ ಉಗ್ರ ಹೋರಾಟ ನಡೆಸಲು ತಿರ್ಮಾನಿಸಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಎಸ್‌ಸಿ.ಎಸ್‌ಟಿ ಮೋರ್ಚಾದ ಮುಖಂಡ ಹೆಚ್.ಬಿ ವೀರಭದ್ರಪ್ಪ ಗುಡುಗಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಶಿವಮೂರ್ತಿ ನಾಯಕರಿಗೆ ಟಿಕೆಟ್ ಕೊಡುವುದು ಬೇಡ. ಬೇರೆ ಯಾರಿಗೆ ಕೊಟ್ಟರೂ ನಾವು ಬೆಂಬಲಿಸುತ್ತೇವೆ ಎಂದು ಅಬ್ಬರಿಸಿದ್ದಾರೆ.
ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದೇನೆ. ನನಗೆ ಟಿಕೆಟ್ ಸಿಗುವುದೆಂಬ ಬಲವಾದ ನಂಬಿಕೆಯಿದೆ. ಶಾಸಕ ಶಿವಮೂರ್ತಿ ನಾಯಕ ಗೆದ್ದ ನಂತರ ಸೌಜನ್ಯಕ್ಕಾದರೂ ದಲಿತ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಆರೋಪಿಸಿದರು.
ಒಂದು ವೇಲೆ ಕಾಂಗ್ರೆಸ್ ಪಕ್ಷ ಶಿವಮೂರ್ತಿ ನಾಯಕರಿಗೆ ಟಿಕೆಟ್ ಕೊಟ್ಟಿದ್ದೆ ಆದಲ್ಲಿ ಅವರ ಸೋಲು ಖಚಿತ ಎಂದು ಕಾಂಗ್ರೆಸ್ ಪಕ್ಷದ ಎಸ್‌ಸಿ.ಎಸ್‌ಟಿ ಮೋರ್ಚಾದ ಮುಖಂಡ ಹೆಚ್.ಬಿ ವೀರಭದ್ರಪ್ಪ ಭವಿಷ್ಯ ನುಡಿದಿದ್ದಾರೆ.