ಇಸ್ಲಾಮಾಬಾದ್ :ಭಾರತ ಮತ್ತು ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭವನ್ನು ಹೊಂದಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ತಿಳಿಸಿದರು.
: ಭಾರತ ಮತ್ತು ಪಾಕಿಸ್ತಾನ ಪರಸ್ಪರ ವ್ಯಾಪಾರದಿಂದ ಬಹಳಷ್ಟು ಲಾಭವನ್ನು ಹೊಂದಿದೆ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ತಿಳಿಸಿದರು.
ಭಾರತದೊಂದಿಗೆ ವ್ಯಾಪಾರದ ಕುರಿತು ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಸ್ಲಾಮಾಬಾದ್ ತನ್ನ ಭೌಗೋಳಿಕ-ಅರ್ಥಶಾಸ್ತ್ರದ ಕಾರ್ಯತಂತ್ರಕ್ಕಾಗಿ ಪಾಲುದಾರಿಕೆಯನ್ನು ರೂಪಿಸಲು ನೋಡುತ್ತಿದೆ. ಪಾಕಿಸ್ತಾನ ಮತ್ತು ಭಾರತವು ಪರಸ್ಪರ ಲಾಭದಾಯಕ ವ್ಯಾಪಾರದಿಂದ ಬಹಳಷ್ಟು ಲಾಭವನ್ನು ಹೊಂದಿದೆ. ಭಾರತದೊಂದಿಗಿನ ಆರೋಗ್ಯಕರ ವ್ಯಾಪಾರ ಚಟುವಟಿಕೆಯಿಂದ ನಾವು ಗಳಿಸಬಹುದಾದ ಆರ್ಥಿಕ ಲಾಭಗಳ ಬಗ್ಗೆ ನಮಗೆ ಅರಿವಿದೆ ಎಂದು ಹೇಳಿದರು.
ಶಹಬಾಜ್ ಷರೀಫ್ ಅವರು ಏಪ್ರಿಲ್ ಆರಂಭದಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಈ ಹಿನ್ನೆಲೆ ಪ್ರಧಾನಿ ಮೋದಿ ಅವರು, ಶೆಹಬಾಜ್ ಅವರನ್ನು ಅಭಿನಂದಿಸಿದ್ದರು. ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಮೋದಿ ಅವರಿಗೆ ಶಹಬಾಜ್ ಅವರು ಧನ್ಯವಾದ ಅರ್ಪಿಸಿದ್ದರು. ಈ ವೇಳೆ ತಮ್ಮ ದೇಶವು ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರಿ ಬಾಂಧವ್ಯವನ್ನು ಬಯಸುತ್ತದೆ ಎಂದು ತಿಳಿಸಿದ್ದರು.