Select Your Language

Notifications

webdunia
webdunia
webdunia
webdunia

ಇಂದು ಪವರ್ ಕಟ್ ಸಾಧ್ಯತೆ

ಇಂದು ಪವರ್ ಕಟ್ ಸಾಧ್ಯತೆ
ಬೆಂಗಳೂರು , ಶನಿವಾರ, 11 ಸೆಪ್ಟಂಬರ್ 2021 (09:35 IST)
Bengaluru Power Cut:: ಕಳೆದ ಸುಮಾರು ಒಂದು ವಾರದಿಂದ ಬೆಂಗಳೂರಿನಲ್ಲಿ ಪದೇ ಪದೇ ಪವರ್ ಕಟ್ ಸಮಸ್ಯೆ ಉಂಟಾಗುತ್ತಿದ್ದು, ಇದು ಜನರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.  ನಗರದಲ್ಲಿ ಇಡೀ ದಿನ ವಿದ್ಯುತ್ ಸಮಸ್ಯೆಯಾದರೆ ಬಹಳ ತೊಂದರೆಗಳಾಗುತ್ತದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ನಿರ್ವಹಣಾ ಕಾರ್ಯನಡೆಯುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 11ರ ಸಂಜೆ 4ರಿಂದ 12ರ ರಾತ್ರಿ 8ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ.  ಅಲ್ಲದೇ ಅ2 ರಿಂದ 14 ರವರೆಗೆ ಸಹ ಪವರ್ ಕಟ್ ಸಮಸ್ಯೆ ಎದುರಾಗಲಿದೆ ಎಂದು ಈಗಾಗಲೇ ಮಾಹಿತಿ ನೀಡಿದೆ. ಯಾವ್ಯಾವ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರಲಿದೆ ಎಂಬ ಪಟ್ಟಿಯನ್ನು ಸಹ ನೀಡಿದೆ.
ತಿಗಳರ ಪಾಳ್ಯ, ವಿನಾಯಕನಗರ, ರಾಘವೇಂದ್ರ ನಗರ, ರಾಘವೇಂದ್ರ ಕೈಗಾರಿಕಾ ಪ್ರದೇಶ, ಬಾಲಾಜಿನಗರ, ಕರಿವೋಬನಹಳ್ಳಿ, ಇಂದಿರಾನಗರ, ಬ್ಲೂಜಾಯ್ ಬಡಾವಣೆ, ಗಂಗೊಂಡನಹಳ್ಳಿ ಮುಖ್ಯರಸ್ತೆ, ತಿಪ್ಪೇನಹಳ್ಳಿ ಸರ್ಕಾರಿ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಎಸ್ಎಲ್ವಿ ಕೈಗಾರಿಕಾ ಪ್ರದೇಶ, ನಂದಗೋಕುಲ ಕೈಗಾರಿಕಾ ಪ್ರದೇಶ, ಚೇತನ್ ಸರ್ಕಲ್, ಸಪ್ತಗಿರಿ ಬಡಾವಣೆ ಸೇರಿದಂತೆ ವೇಣುಗೋಪಾಲ ನಗರ, ದೊಡ್ಡ ಬಿದರಕಲ್ಲು, ಸುವರ್ಣ ನಗರ, ಮಾರಣ್ಣ ಬಡಾವಣೆ, ತಿಪ್ಪೇನಹಳ್ಳಿ, ಅಂದಾನಪ್ಪ ಬಡಾವಣೆ, ಮುನೇಶ್ವರ ಬಡಾವಣೆ ಮತ್ತು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ ಹೇಳಿದೆ.
ಸಾಗರನಹಳ್ಳಿ,ತ್ಯಾಗಟೂರ್, ಯಲ್ಲಾಪುರ,ಬೊಮ್ಮೇನಹಳ್ಳಿ,ಕುಂದೂರನಹಳ್ಳಿ. ರಾಜೀವಗಾಂಧಿ ನಗರ, ಬಿರ್ವೇಶ್ವರ ನಗರ, ವೈಲ್ಡ್ ಕ್ರಾಫ್ಟ್ ಹತ್ತಿರ, ಕೆಬ್ಬೇಹಳ್ಳಿ, ಹನುಮಂತರಾಯನ ಪಾಳ್ಯದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಮನವಿ ಮಾಡಿದೆ.
ವಸಂತ ವಲ್ಲಭ ನಗರ, ಶಾರದ ನಗರ, ಮಾರುತಿ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಜರಗನಹಳ್ಳಿ, ಎಂಎಸ್ ಲೇಔಟ್, ರಾಜಮ್ಮ ಗಾರ್ಡೆನ್, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಕತ್ತರಿಗುಪ್ಪೆ, ಬನಶಂಕರಿ ಮೂರನೇ ಹಂತದಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಬೆಸ್ಕಾಂ ಹೇಳಿದೆ.
ಕಳೆದ ಸುಮಾರು ಒಂದು ವಾರದಿಂದ ಬೆಂಗಳೂರಿನಲ್ಲಿ ಪದೇ ಪದೇ ಪವರ್ ಕಟ್ ಸಮಸ್ಯೆ ಉಂಟಾಗುತ್ತಿದ್ದು, ಇದು ಜನರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.  ನಗರದಲ್ಲಿ ಇಡೀ ದಿನ ವಿದ್ಯುತ್ ಸಮಸ್ಯೆಯಾದರೆ ಬಹಳ ತೊಂದರೆಗಳಾಗುತ್ತದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.    ಇದಿಷ್ಟೇ ಅಲ್ಲದೇ ಬೇರೆ ಕೆಲ ನಗರಗಳಲ್ಲಿ ಸಹ ವಿದ್ಯುತ್ ಸಮಸ್ಯೆ ತಲೆದೋರಬಹುದು ಎಂದು ಹೇಳಲಾಗುತ್ತಿದೆ.
ಬೆಸ್ಕಾಂ ಮುಂಚಿತವಾಗಿ ಮಾಹಿತಿಯನ್ನೇನೋ ನೀಡಿದೆ, ಆದರೆ ಇದು ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡುತ್ತದೆ. ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ವಾರಗಳ ಕಾಲ  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ನಿರ್ಭಯಾ ಪ್ರಕರಣ; ಮಹಿಳೆ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದ ಕಾಮುಕ