Select Your Language

Notifications

webdunia
webdunia
webdunia
webdunia

ಮೀಟರ್ ರೀಡಿಂಗ್ ಬಂದ ಬೆಸ್ಕಾಂ ನೌಕರನಿಗೆ ಗೂಸಾ!

bescom
bengaluru , ಸೋಮವಾರ, 30 ಆಗಸ್ಟ್ 2021 (20:01 IST)
ಮೀಟರ್ ರೀಡಿಂಗ್ ಗೆ ಆಗಮಿಸಿದ್ದ ಬೆಸ್ಕಾಂ ನೌಕರನಿಗೆ ಮನಸೋ ಇಚ್ಚೆ ಥಳಿಸಿದ ಘಟನೆ ಕೋಲಾರದ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ, ಗೌನಿಪಲ್ಲಿಯ
ಕೊತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಹೊಡೆದಾಟದ ವಿಡಿಯೊ ಮೊಬೈಲ್ ನಲ್ಲಿ ಸೆರೆಯಾಗಿದೆ.
ಮೀಟರ್ ರೀಡರ್ ನಾಗೇಶ್ ಎನ್ನುವರ ಮೇಲೆ ಕೊತ್ತೂರು ಗ್ರಾಮದ ಉತ್ತಣ್ಣ ಹಾಗು ಅವರ ಮಗ ಶ್ರೀನಾಥ್ ಹಲ್ಲೆ ಮಾಡಿದ್ದು, ಉತ್ತಣ್ಣ 13  ಸಾವಿರ  ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು,  ವಿದ್ಯುತ್ ಪೂರೈಕೆ ನಿಲ್ಲಿಸಲಾಗಿತ್ತು, ಇದನ್ನ ಪ್ರಶ್ನಿಸಿದ್ದಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ  ಮೀಟರ್ ರೀಡರ್  ನಾಗೇಶ್ ಹಾಗು ಶ್ರೀನಾಥ್ ಮಧ್ಯೆ ಹೊಡೆದಾಟ ನಡೆದಿದ್ದು, ಮಧ್ಯ ಪ್ರವೇಶ ಮಾಡಿದ ಉತ್ತಣ್ಣ ಸಹ ಹಲ್ಲೆ ಮಾಡಿದ್ದಾರೆ, ಹೊಡೆದಾಟ ದಿಂದ ನಾಗೇಶ್ ರಿಗೆ ಸಣ್ಣ ಪುಟ್ಟ ಗಾಯಗಳಾಗಿ ಗೌನಿಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲುಪಡಿಸಲಾಗಿದ್ದು ಘಟನೆ ಉತ್ತಣ್ಣನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದು,  ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

34 ಬಂಡಾಯ ಅಭ್ಯರ್ಥಿಗಳ ಅಮಾನತು ಮಾಡಿದ ಕಾಂಗ್ರೆಸ್