Select Your Language

Notifications

webdunia
webdunia
webdunia
webdunia

ಜನಸಂಖ್ಯೆ ಸ್ಫೋಟ, ಚೀನಾ ಹಿಂದಿಕ್ಕಿದ ಭಾರತ

ಜನಸಂಖ್ಯೆ ಸ್ಫೋಟ, ಚೀನಾ ಹಿಂದಿಕ್ಕಿದ ಭಾರತ
ನವದೆಹಲಿ , ಗುರುವಾರ, 20 ಏಪ್ರಿಲ್ 2023 (10:29 IST)
ನವದೆಹಲಿ : ಜಗತ್ತಿನಲ್ಲಿಯೇ ಅತಿ ಹೆಚ್ಚು ಹೊಂದಿದ್ದ ಚೀನಾವನ್ನು ಭಾರತ ಹಿಂದಿಕ್ಕಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ.
 
ವಿಶ್ವಸಂಸ್ಥೆಯ ಡ್ಯಾಶ್ಬೋರ್ಡ್ ಪ್ರಕಾರ ಭಾರತದ ಜನಸಂಖ್ಯೆಯ ಶೇ.25 ರಷ್ಟು ಜನರು 0-14 ವರ್ಷ ವಯಸ್ಸಿನ ನಡುವಿನವರಾಗಿದ್ದು ಶೇ.18 ರಷ್ಟು ಜನರು 10-19 ವರ್ಷ ವಯಸ್ಸಿನ ವ್ಯಾಪ್ತಿಯಲ್ಲಿದ್ದಾರೆ. 10-24 ವರ್ಷದ ನಡುವಿನ ಜನರು ಶೇ.26 ರಷ್ಟಿದ್ದು, 15-64 ವರ್ಷ ವಯಸ್ಸಿನವರು ಶೇ.68 ರಷ್ಟು ಇದ್ದಾರೆ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರು ಶೇ.7 ರಷ್ಟು ಇದ್ದಾರೆ.

ತಜ್ಞರ ಪ್ರಕಾರ ಕೇರಳ ಮತ್ತು ಪಂಜಾಬ್ನಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಿದ್ದು, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ವಿವಿಧ ಏಜೆನ್ಸಿಗಳು ನಡೆಸಿದ ಹಲವಾರು ಅಧ್ಯಯನಗಳ ಪ್ರಕಾರ ಭಾರತದ ಜನಸಂಖ್ಯೆಯು 3 ದಶಕಗಳ ವರೆಗೆ ನಿರಂತರವಾಗಿ ಹೆಚ್ಚಲಿದ್ದು 165 ಕೋಟಿಗೆ ತಲುಪಲಿದೆ. ಆ ಬಳಿಕ ಅದು ಇಳಿಮುಖವಾಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನ ಅರುಣ್ ಯೋಗಿರಾಜ್‍ಗೆ ಜವಾಬ್ದಾರಿ