Select Your Language

Notifications

webdunia
webdunia
webdunia
webdunia

ಪೋಲಿಯೊ : ತುರ್ತು ಪರಿಸ್ಥಿತಿ ಘೋಷಣೆ

ಪೋಲಿಯೊ : ತುರ್ತು ಪರಿಸ್ಥಿತಿ ಘೋಷಣೆ
ವಾಷಿಂಗ್ಟನ್ , ಸೋಮವಾರ, 12 ಸೆಪ್ಟಂಬರ್ 2022 (07:28 IST)
ವಾಷಿಂಗ್ಟನ್ : ನಸ್ಸೌ ಕೌಂಟಿ ದ್ವೀಪದ ತ್ಯಾಜ್ಯದ ನೀರಿನ ಮಾದರಿಗಳಲ್ಲಿ ವೈರಸ್ ಕಂಡುಬಂದ ನಂತರ ನ್ಯೂಯಾರ್ಕ್ ಪೋಲಿಯೊ ತುರ್ತು ಪರಿಸ್ಥಿತಿಯನ್ನು  ಘೋಷಿಸಿದೆ.

ನ್ಯೂಯಾರ್ಕ್ನ ಆರೋಗ್ಯ ಇಲಾಖೆಯಲ್ಲಿ ಪೋಲಿಯೊ ಲಸಿಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಲಸಿಕೆ ನಿರ್ವಾಹಕರ ವಿಭಾಗವನ್ನೂ ವಿಸ್ತರಿಸಲು ಯೋಜಿಸಿದೆ. ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು, ಶುಶ್ರೂಷಕಿಯರು ಹಾಗೂ ಫಾರ್ಮಸಿಸ್ಟ್ ಸೇರಿಸಿಕೊಳ್ಳುವಂತೆ ಗವರ್ನರ್ ಕ್ಯಾಥಿ ಹೊಚುಲ್ ಆದೇಶಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಮೇರಿ ಬ್ಯಾಸೆಟ್, ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿದ್ದರೆ ಅಥವಾ ಮಗುವಿನ ದೇಹವು ಲಸಿಕೆಯೊಂದಿಗೆ ನವೀಕೃತವಾಗದಿದ್ದರೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಬಹುದು.

ಹಾಗಾಗಿ ನ್ಯೂಯಾರ್ಕ್ನ ಯಾವುದೇ ನಿವಾಸಿಗಳೂ ಇಂತಹ ಅಪಾಯಗಳನ್ನು ತಂದೊಡ್ಡಿಕೊಳ್ಳದಂತೆ ಮನವಿ ಮಾಡುತ್ತೇನೆ. ಈಗಾಗಲೇ ನ್ಯೂಯಾರ್ಕ್ನಲ್ಲಿ ಪೋಲಿಯೊ ಲಸಿಕೆ ಅಭಿಯಾನ ಪೂರ್ಣಗೊಳಿಸಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ