Select Your Language

Notifications

webdunia
webdunia
webdunia
webdunia

ಆಸ್ಕರ್ ವಿಜೇತ ವಿಲಿಯಂ ಹರ್ಟ್ ಇನ್ನಿಲ್ಲ

ಆಸ್ಕರ್ ವಿಜೇತ ವಿಲಿಯಂ ಹರ್ಟ್ ಇನ್ನಿಲ್ಲ
ನ್ಯೂಯಾರ್ಕ್ , ಸೋಮವಾರ, 14 ಮಾರ್ಚ್ 2022 (14:16 IST)
ನ್ಯೂಯಾರ್ಕ್ : ಹಾಲಿವುಡ್ ನಟ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ವಿಲಿಯಂ ಹರ್ಟ್ ಅಕಾ ಜನರಲ್ ಥಡ್ಡಿಯಸ್ ರಾಸ್ (71) ಭಾನುವಾರ ನಿಧನರಾಗಿದ್ದಾರೆ.

ನೆನ್ನೆಯಷ್ಟೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದ ಅವರು, ಕುಟುಂಬದೊಂದಿಗೆ ಸಂಭ್ರಮಸಿದ್ದರು. ಅವರ 72ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಾರದ ಲೋಕಕ್ಕೆ ಹೋಗಿದ್ದಾರೆ ವಿಲಿಯಂ. ತಂದೆಯ ಅಗಲಿಕೆಯನ್ನು ಪುತ್ರ ವಿಲ್ ಭಾನುವಾರ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ.

ನಾಲ್ಕು ಜನ ಮಕ್ಕಳು ಮತ್ತು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ ವಿಲಿಯಂ. ಅಂತಿಮ ವಿಧಾನದ ಕುರಿತು ಕುಟುಂಬ ಇನ್ನೂ ಮಾಹಿತಿ ಹಂಚಿಕೊಂಡಿಲ್ಲ. 

ನೆಚ್ಚಿನ ನಟನ ಅಗಲಿಕೆಯ ನೋವನ್ನು ಹಾಲಿವುಡ್ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುವ ಮೂಲಕ ಕಂಬನಿ ಮಿಡಿದಿದೆ. ಅಲ್ಲದೇ, ಆಸ್ಕರ್ ಪ್ರಶಸ್ತಿ ವಿಜೇತ ನಟನ ವ್ಯಕ್ತಿತ್ವದ ಬಗ್ಗೆ ಹಾಲಿವುಡ್ ಕೊಂಡಾಡಿದೆ.

ವಿಲಿಯಂ 1980ರಲ್ಲಿ ನಟಿಸಿದ್ದ ಚಿತ್ರ, ವೈಜ್ಞಾನಿಕ ಕಾಲ್ಪನಿಕ ಥ್ರಿಲ್ಲರ್ ಆಲ್ಟರ್ಡ್ ಸ್ಟೇಟ್ಸ್ನಲ್ಲಿ ವಿಜ್ಞಾನಿಯಾಗಿ ನಟಿಸಿದ್ದರು. ಇದಕ್ಕಾಗಿ ಅವರು ವರ್ಷದ ಹೊಸ ತಾರೆಗಾಗಿ ಗೋಲ್ಡನ್ ಗ್ಲೋಬ್ ನಾಮನಿರ್ದೇಶನವನ್ನು ಪಡೆದಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಹಿಜಬ್ ಹೈಕೋರ್ಟ್ ತೀರ್ಪು