ಹೊಸದಿಲ್ಲಿ: ಕೇಂದ್ರ ಸರಕಾರವು ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡಿ ರುವ ಮಕ್ಕಳ ಸಮಗ್ರ ಆರೈಕೆ, ನೆರವಿಗೆ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಯಡಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ.
ಯೋಜನೆಯಡಿ 18 ವರ್ಷ ವಯಸ್ಸಿನ ಬಳಿಕ ಮಾಸಿಕ ಸ್ಟೈಫಂಡ್ ಒದಗಿಸಲಾಗುತ್ತದೆ ಮತ್ತು 23 ವರ್ಷ ತುಂಬಿದಾಗ 10 ಲಕ್ಷ ರೂ. ನೀಡಲಾಗುತ್ತದೆ. ಅರ್ಹ ಮಕ್ಕಳು ಯೋಜನೆ ಘೋಷಣೆಯಾದ 2021ರ ಮೇ 29ರಿಂದ 2021ರ ಡಿ. 31ರ ವರೆಗೆ ನೋಂದಣಿ ಮಾಡಿಕೊಳ್ಳಬಹುದು.
ಕೊರೊನಾದಿಂದ ಹೆತ್ತವರನ್ನು ಕಳೆದುಕೊಂಡ ಎಲ್ಲ ಮಕ್ಕಳಿಗೆ 18 ವರ್ಷ ಪೂರೈಸುವ ವರೆಗೆ ಈ ಯೋಜನೆ ಚಾಲ್ತಿಯಲ್ಲಿರುವ ನಿರೀಕ್ಷೆಯಿದೆ. 2020ರ ಮಾ. 11ರ ಬಳಿಕ 2021ರ ಡಿಸೆಂಬರ್ ನಡುವಣ ಅವಧಿಯಲ್ಲಿ ಕೊರೊನಾದಿಂದಾಗಿ ಅನಾಥರಾದ 18ರೊಳಗಿನ ಎಲ್ಲ ಮಕ್ಕಳು ಇದರಡಿ ಸೌಲಭ್ಯ ಪಡೆಯಲು ಅರ್ಹರು.