Publish Date: Sun, 03 Oct 2021 (16:10 IST)
Updated Date: Sun, 03 Oct 2021 (16:12 IST)
ಕೊರೊನಾ ನಂತರ ಆರ್ಥಿಕ ಚಟುವಟಿಕೆಗಳಿಗೆ ಸರ್ಕಾರ ಈಗ ಅನುಮತಿ ನೀಡುತ್ತಿದೆ. ಹೀಗಾಗಿ ನಾಳೆಯಿಂದ ಪಬ್ಗಳು ಸಹ ಪೂರ್ಣ ಪ್ರಮಾಣದಲ್ಲಿ ತೆರೆಯುತ್ತಿವೆ. ಈ ಹಿನ್ನೆಲೆ ಪಬ್ ಮಾಲೀಕರು ಹಾಗೂ ಸಿಬ್ಬಂದಿ ಬೆಂಗಳೂರಲ್ಲಿ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ಜನ ಸಹ ಕೊರೊನಾದಿಂದ ಹೊರ ಬಂದು ಮೈಂಡ್ ರಿಲೀಫ್ ಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಆದ್ರೆ ಪಬ್ಗಳಲ್ಲಿ ಜನ ಯಾವ ರೀತಿ ಕೊರೊನಾ ನಿಯಮಗಳನ್ನು ಪಾಲನೆ ಮಾಡ್ತಾರೆ ಅನ್ನೊದು ಯಕ್ಷ ಪ್ರಶ್ನೆಯಾಗಿ ಕಾಡುತ್ತದೆ. ಸರ್ಕಾರ ಅವಕಾಶ ಕೊಟ್ಟಿದೆ ಅಂತಾ ಜನ ಸಹ ಬೇಕಾಬಿಟ್ಟಿಯಾಗಿ ಓಡಾಡದೇ ಸರ್ಕಾರ ಸಹ ಪಬ್ಗಳ ಮೇಲೆ ಒಂದು ಕಣ್ಣಿಟ್ಟರೆ ಓಳಿತು.