ವಿಶ್ವದಲ್ಲಿ ಈವರೆಗೆ 50 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.ಡೆಲ್ಟಾ ರೂಪಾಂತರಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ.ವಿಶ್ವದ ಅರ್ಧದಷ್ಟು ಜನ ಕೂಡಾ ಕನಿಷ್ಠ ಒಂದು ಡೋಸ್ ಕೂಡಾ ಲಸಿಕೆ ಕೂಡಾ ಪಡೆದಿಲ್ಲ.ಒಂದೂವರೆ ವರ್ಷದಲ್ಲಿ 20.6 ಲಕ್ಷ ಜನರು ಮಹಾಮಾರಿಗೆ ಅಸುನೀಗಿದ್ದಾರೆ.ಆದರೆ ಅಷ್ಟೇ ಸಂಖ್ಯೆಯ ಸಾವು ಕೇವಲ 236 ದಿನಗಳಲ್ಲಿ ಸಂಭವಿಸಿವೆ.ಏಳು ದಿನಗಳ ಸರಾಸರಿಯಲ್ಲಿ ವರದಿಯಾದ ಜಾಗತಿಕ ಸಾವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಮೇರಿಕಾ, ರಷ್ಯಾ, ಬ್ರೆಜಿಲ್, ಮೆಕ್ಸಿಕೋ ಮತ್ತು ಭಾರತದಲ್ಲಿಯೇ ಸಂಭವಿಸಿವೆ.ಜಾಗತಿಕವಾಗಿ ಕಳೆದ ವಾರದಲ್ಲಿ ಪ್ರತಿದಿನ ಸರಾಸರಿ 8,000 ಮಂದಿ ಸಾವನ್ನಪ್ಪಿದ್ದಾರೆ.ಅಂದ್ರೆ ಪ್ರತಿ ನಿಮಿಷಕ್ಕೆ ಐದು ಸಾವುಗಳು ಸಂಭವಿಸುತ್ತಿವೆ.