ಉತ್ತರ ಪ್ರದೇಶ ಸರ್ಕಾರ ಹೊಸ ಯೋಜನೆಯಾದ 'ಒಂದು ಜಿಲ್ಲೆ - ಒಂದು ಉತ್ಪನ್ನ' ರಾಯಭಾರಿಯಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಆಯ್ಕೆಯಾಗಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿವಾಸಕ್ಕೆ ಕಂಗನಾ ರಣಾವತ್ ತಡರಾತ್ರಿ ಭೇಟಿ ನೀಡಿದ ಬೆನ್ನಲ್ಲೇ ಈ ಮಹತ್ವದ ಘೋಷಣೆಯನ್ನು ಮಾಡಲಾಗಿದೆ.
ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ನಿರ್ದಿಷ್ಟ ಸಾಂಪ್ರದಾಯಿಕ ಕೈಗಾರಿಕಾ ಕೇಂದ್ರಗಳನ್ನು ರಚಿಸುವ ಉದ್ದೇಶದಿಂದ ' ಒಂದು ಜಿಲ್ಲೆ - ಒಂದು ಉತ್ಪನ್ನ' ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಟ್ವಿಟರ್ನಲ್ಲಿ ಶಾಶ್ವತವಾಗಿ ಬ್ಯಾನ್ ಆಗಿರುವ ನಟಿ ಕಂಗನಾ ರಣಾವತ್, ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ರೊಂದಿಗಿನ ಮಾತುಕತೆಯನ್ನು ಸ್ಮರಣೀಯ ಎಂದಿರುವ ನಟಿ ಕಂಗನಾ ಮುಂಬರುವ ವಿಧಾನಸಭಾ ಚುನಾವಣೆಗೆ ಯೋಗಿ ಆದಿತ್ಯನಾಥ್ಗೆ ಶುಭ ಕೋರಿದ್ದಾರೆ. ಅಲ್ಲದೇ ಯೋಗಿ ಆದಿತ್ಯನಾಥ್ ತಮಗೆ ರಾಮ ಜನ್ಮ ಭೂಮಿ ಬಳಸಲಾಗಿದ್ದ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ.