Select Your Language

Notifications

webdunia
webdunia
webdunia
webdunia

ಭೀಕರ ಭೂಕಂಪಕ್ಕೆ ಜನಜೀವನ ತತ್ತರ! 7,900ಕ್ಕೇರಿದ ಸಾವಿನ ಸಂಖ್ಯೆ

ಭೀಕರ ಭೂಕಂಪಕ್ಕೆ ಜನಜೀವನ ತತ್ತರ! 7,900ಕ್ಕೇರಿದ ಸಾವಿನ ಸಂಖ್ಯೆ
ಅಂಕಾರಾ , ಬುಧವಾರ, 8 ಫೆಬ್ರವರಿ 2023 (07:33 IST)
ಅಂಕಾರಾ : ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.
 
ಈವರೆಗೆ ದುರಂತದಲ್ಲಿ ಮಡಿದವರ 7,900ಕ್ಕೆ ಏರಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವವರ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದ್ದು,

ಕೊರೆಯುವ ಚಳಿಗೆ ರಕ್ಷಣಾ ಸಿಬ್ಬಂದಿ ಕೂಡ ಗಢಗಢ ನಡುಗುತ್ತಿದ್ದಾರೆ. ಆದರೂ ಕೂಡ ಹಗಲಿರುಳೆನ್ನದೇ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನ ಬೆಳ್ಳಿ ದರ ಕೊಂಚ ಏರಿಕೆ