Select Your Language

Notifications

webdunia
webdunia
webdunia
webdunia

ಭೂಕಂಪ ; ಆತಂಕದಿಂದ ಮನೆಯಿಂದ ಹೊರಗಡೆ ಬಂದ ಜನ!

ಭೂಕಂಪ  ; ಆತಂಕದಿಂದ ಮನೆಯಿಂದ ಹೊರಗಡೆ ಬಂದ ಜನ!
ನವದೆಹಲಿ , ಶುಕ್ರವಾರ, 6 ಜನವರಿ 2023 (07:39 IST)
ನವದೆಹಲಿ : ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ 5.9 ತೀವ್ರತೆಯ ಭೂಕಂಪ  ಸಂಭವಿಸಿದ್ದು ದೆಹಲಿ ಮತ್ತು ನೆರೆಯ ಎನ್ಸಿಆರ್ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.

ಭಾರತೀಯ ಕಾಲಮಾನ ರಾತ್ರಿ 7:55ಕ್ಕೆ ಅಫ್ಘಾನಿಸ್ತಾನದ ಫೈಜಾಬಾದ್ನಿಂದ ದಕ್ಷಿಣಕ್ಕೆ 79 ಕಿಮೀ ದೂರದಲ್ಲಿ 200 ಕಿ.ಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ. 

ಈ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ, ದೆಹಲಿ ಹಾಗೂ ನೆರೆಯ ಎನ್ಸಿಆರ್ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲಾರ ಮುಖಂಡರು ಸಿದ್ದು ಭೇಟಿ