Select Your Language

Notifications

webdunia
webdunia
webdunia
webdunia

ಪ್ರಾಕೃತಿಕ ವಿಕೋಪ : ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ!

ಪ್ರಾಕೃತಿಕ ವಿಕೋಪ : ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆ!
ಇಸ್ತಾಂಬುಲ್ , ಮಂಗಳವಾರ, 7 ಫೆಬ್ರವರಿ 2023 (07:51 IST)
ಇಸ್ತಾಂಬುಲ್ : ಪ್ರಾಕೃತಿಕ ವಿಕೋಪಕ್ಕೆ ಟರ್ಕಿ – ಸಿರಿಯಾ ದೇಶಗಳಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದೆ. ಒಂದೇ ದಿನ 2 ದೇಶಗಳಲ್ಲಿ 3 ಬಾರಿ ಪ್ರಬಲ ಸಂಭವಿಸಿದ್ದು, ಸಾವಿನ ಸಂಖ್ಯೆ 4 ಸಾವಿರಕ್ಕೆ ಏರಿಕೆಯಾಗಿದೆ.
 
ಸುಮಾರು 15 ಸಾವಿರ ಮಂದಿ ಗಾಯಗೊಂಡಿದ್ದಾರೆ. 4,900 ಕಟ್ಟಡಗಳು ಸಂಪೂರ್ಣ ನೆಲಸಮಗೊಂಡಿವೆ. ಟರ್ಕಿಯಲ್ಲಿ ಸೋಮವಾರ ನಸುಕಿನ ಜಾವದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಬೆನ್ನಲ್ಲೇ ಮತ್ತೆರಡು ಬಾರಿ ಭೂಕಂಪ ಸಂಭವಿಸಿದ್ದು,

ಕಳೆದ 24 ಗಂಟೆಯಲ್ಲಿ ಸರಿಸುಮಾರು 2,600 ಮಂದಿ ಬಲಿಯಾಗಿದ್ದರು. 8 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಸಾವಿನ ಸಂಖ್ಯೆ ಹಾಗೂ ಗಾಯಗೊಂಡ ಸಂತ್ರಸ್ತರ ಸಂಖ್ಯೆ ಏರುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಅವರೇ ಪಂಚರ್ ಆಗ್ತಾರೋ ನೋಡೋಣ-ಡಿಕೆಶಿ