Publish Date: Sun, 04 Sep 2022 (10:19 IST)
Updated Date: Sun, 04 Sep 2022 (09:48 IST)
ಬೆಂಗಳೂರು : ಮಳೆ ಬಂದರೆ ಅಂಡರ್ಪಾಸ್ನಲ್ಲಿ ಸವಾರರು ದ್ವಿಚಕ್ರ ವಾಹನ ನಿಲ್ಲಿಸಿದರೆ ಇನ್ನು ಮುಂದೆ ದಂಡ ಕಟ್ಟಬೇಕಾಗುತ್ತದೆ.
ಹೌದು. ಒಂದು ವೇಳೆ ವಾಹನ ಏನಾದರೂ ನಿಲ್ಲಿಸಿದರೆ ಸಂಚಾರಿ ಪೊಲೀಸರು ದಂಡ ಹಾಕಲಿದ್ದಾರೆ. ಅಂಡರ್ ಪಾಸ್ನಲ್ಲಿ ವಾಹನ ನಿಲ್ಲಿಸುವುದರಿಂದ ಹಿಂಬದಿಯಿಂದ ಬರುವ ವಾಹನ ಅಪಘಾತ ಸಂಭವಿಸಿದೆ. ಒಟ್ಟು 3 ಕಡೆ ಈ ರೀತಿಯ ಪ್ರಕರಣ ದಾಖಲಾಗಿದೆ.
ಈ ಅಪಘಾತವನ್ನು ತಡೆಯುವ ಉದ್ದೇಶದಿಂದ ಪೊಲೀಸರು ದಂಡ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸಂಚಾರಿ ಪೊಲೀಸರ ಕ್ರಮವನ್ನು ಸಚಿವ ಸೋಮಣ್ಣ ಸಮರ್ಥನೆ ಮಾಡಿಕೊಂಡಿದ್ದಾರೆ.