Select Your Language

Notifications

webdunia
webdunia
webdunia
webdunia

ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಆರ್ಭಟ

webdunia
ಚಾಮರಾಜನಗರ , ಮಂಗಳವಾರ, 30 ಆಗಸ್ಟ್ 2022 (21:10 IST)
ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಭಾರಿ ಮಳೆಗೆ ಮಾಂಬಳ್ಳಿ ಪೊಲೀಸ್ ಠಾಣೆ ಜಲಾವೃತವಾಗಿದೆ.
ಯಳಂದೂರು ತಾಲ್ಲೂಕುಗಳಲ್ಲಿ ತಡರಾತ್ರಿಯಿಂದ ಮುಂಜಾನೆಯವರೆಗೂ ಬಿರುಸಿನ ಮಳೆಯಾಗಿದೆ. ನಗರ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದೆ. ತಾಲ್ಲೂಕಿನ ಮಂಗಲ ಗ್ರಾಮದ ವ್ಯಾಪ್ತಿಯಲ್ಲಿ 14.3 ಸೆಂ.ಮೀನಷ್ಟು ಮಳೆ ಬಿದ್ದಿದೆ. ಕೆಂಪನಪುರ ಹಾಗೂ ಆಲೂರಿನಲ್ಲಿ 13.5 ಸೆಂ.ಮೀನಷ್ಟು ಮಳೆ ಸುರಿದಿದೆ. ಚಾಮರಾಜನಗರದ ಐತಿಹಾಸಿಕ ದೊಡ್ಡರಸನ ಕೊಳ ಪೂರ್ಣವಾಗಿ ಭರ್ತಿಯಾಗುವುದಕ್ಕೆ ಇನ್ನು ಒಂದು ಮೆಟ್ಟಿಲಷ್ಟೇ ಬಾಕಿ ಇದೆ. ಐದು ದಿನಗಳಿಂದ ರಾತ್ರಿ ಹೊತ್ತು ಸುರಿಯುತ್ತಿರುವ ಮಳೆಯಿಂದಾಗಿ ಕೊಳಕ್ಕೆ ಭಾರಿ‌ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಕೊಳದ ಮೇಲ್ಭಾಗದಲ್ಲಿರುವ ಗಣಪತಿ ದೇವಾಲಯದವರೆಗೂ ‌ನೀರು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಪೋ ಮ್ಯಾನೇಜರ್ ಕಿರುಕುಳ -ನೌಕರನ ಶವವಿಟ್ಟು ಪತ್ನಿಯಿಂದ ಪ್ರತಿಭಟನೆ