Publish Date: Tue, 30 Aug 2022 (18:35 IST)
Updated Date: Tue, 30 Aug 2022 (18:38 IST)
ಮಹಾಮಳೆಗೆ ರೇಷ್ಮೆನಗರಿ ರಾಮನಗರ ಅಕ್ಷರಶಃ ತತ್ತರಿಸಿದೆ. ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಜಲಪ್ರಳಯವಾಗಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜನಜಾನುವಾರುಗಳಿಗೆ ಹಾನಿಯಾಗಿದೆ. ಕಳೆದ 30ವರ್ಷಗಳಲ್ಲೇ ಹೆಚ್ಚು ಮಳೆ ಆಗಿದ್ದು, ರಾಮನಗರದಲ್ಲಿ ವಾಡಿಕೆಗಿಂತ ಶೇ.700ರಷ್ಟು ಅಧಿಕ ಮಳೆ ದಾಖಲಿಸಿದೆ. ರಾಮನಗರ, ಚನ್ನಪಟ್ಟಣ ತಾಲೂಕುಗಳು ಅಕ್ಷರ ಸಹ ನೀರಿನಲ್ಲಿ ಮುಳುಗುವ ಹಂತ ತಲಪಿವೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಬೆಂಗಳೂರು-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.