Select Your Language

Notifications

webdunia
webdunia
webdunia
webdunia

ಬೆಂಗಳೂರಿಗರೇ ಗಮನಿಸಿ : ರಾತ್ರಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ : ರಾತ್ರಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು , ಶನಿವಾರ, 26 ಮಾರ್ಚ್ 2022 (07:10 IST)
ಬೆಂಗಳೂರು : ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ನಾಳೆ ರಾತ್ರಿ ವ್ಯತ್ಯಯವಾಗಲಿದೆ.

ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 9 ಗಂಟೆ ಬಳಿಕ ಎಂಜಿ ರಸ್ತೆಯಿಂದ ಬೈಯಪ್ಪನಹಳ್ಳಿ ನಿಲ್ದಾಣದವರೆಗೆ ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದೆ.

ಎಂಜಿ ರೋಡ್ ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗಿನ ವಾಣಿಜ್ಯ ಸೇವೆ ರಾತ್ರಿ 9. 30ಕ್ಕೆ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಎಂಜಿ ರಸ್ತೆಯಿಂದ ಕೆಂಗೇರಿ ಮಾರ್ಗಕ್ಕೆ ಮಾತ್ರ ಸಂಚಾರ ಲಭ್ಯವಾಗಿರುತ್ತದೆ.

ಕೆಂಗೇರಿ ಮತ್ತು ಬೈಯಪ್ಪನ ಹಳ್ಳಿ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಕೊನೆಯ ಮೆಟ್ರೋ ರೈಲು ಸಂಚಾರ ಮಾಡಲಿದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ 9.30ಕ್ಕೆ ಕಡೇಯ ರೈಲು ಇದ್ದು, ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ವೇಳಾಪಟ್ಟಿ ಪ್ರಕಾರ ಮೆಟ್ರೋ ಸಂಚಾರ ಪುನರಾರಂಭವಾಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದಗಂಗಾ ಮಠಕ್ಕೆ ಅಮಿತ್ ಶಾ ಭೇಟಿ