Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಅಂಗಡಿಗಳು ಬಂದ್!?

ಬೆಂಗಳೂರಿನ ಅಂಗಡಿಗಳು ಬಂದ್!?
ಬೆಂಗಳೂರು , ಗುರುವಾರ, 24 ಮಾರ್ಚ್ 2022 (09:04 IST)
ಬೆಂಗಳೂರು : ಹಿಜಬ್ ವಿವಾದದ ಕಿಡಿ ಈಗ ರೂಪಾಂತರಗೊಂಡಿದೆ.

ಶಾಲಾ-ಕಾಲೇಜುಗಳಲ್ಲಿ ಅಷ್ಟೇ ಇದ್ದ ವಿವಾದ ಈಗ ಹೊಸ ತಿರುವು ಪಡೆದಿದ್ದು, ಧರ್ಮ ಧರ್ಮಗಳ ನಡುವೆ ದೊಡ್ಡ ಕಂದಕವೇ ನಿರ್ಮಾಣಗೊಳ್ತಿದೆ.

ನಿನ್ನೆವರೆಗೂ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ವ್ಯಾಪಾರ ಧರ್ಮಯುದ್ಧ, ಈಗ ಕೋವಿಡ್ ವೈರಸ್ಗಿಂತಲೂ ವೇಗವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳತೊಡಗಿದೆ.

ಬೆಂಗಳೂರಿನಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಶುರು ಮಾಡಿದ್ದಾರೆ. ಹಲವು ಹಿಂದೂ ದೇಗುಲಗಳಿಗೆ ಸೇರಿದ ಅಂಗಡಿಗಳಿಂದ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಶುರುವಾಗಿವೆ.

ಉಪ್ಪಾರಪೇಟೆಯ ಆಂಜನೇಯಸ್ವಾಮಿ ದೇಗುಲದ ಮುಂದಿರುವ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ 8 ಮುಸ್ಲಿಮರ ಅಂಗಡಿಗಳನ್ನು ಹಿಂದೂ ಕಾರ್ಯಕರ್ತರು ಬಂದ್ ಮಾಡಿಸಿದ್ದಾರೆ. ತಹಶೀಲ್ದಾರ್ ಸೂಕ್ತ ಕ್ರಮದ ಭರವಸೆ ನೀಡಿದ ನಂತ್ರ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಬನಶಂಕರಿ ಸೇರಿ ಮುಜರಾಯಿ ವ್ಯಾಪ್ತಿಯ ಎಲ್ಲಾ ದೇಗುಲಗಳ ಜಾತ್ರೆಗಳಲ್ಲಿ, ದೇಗುಲಕ್ಕೆ ಸಂಬಂಧಿಸಿದ ಕಟ್ಟಡಗಳಲ್ಲಿ ವ್ಯಾಪಾರ ಮಾಡಲು ಮುಸ್ಲಿಮರಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಮುಖಂಡರು ಒತ್ತಾಯಿಸಿದ್ದಾರೆ.

ಹಿಜಬ್ ತೀರ್ಪನ್ನು ಖಂಡಿಸಿ ಮುಸ್ಲಿಮರು ಇತ್ತೀಚಿಗೆ ಬಂದ್ ನಡೆಸಿದ್ದು, ಕರಾವಳಿಯ ಹಿಂದೂ ಸಂಘಟನೆಗಳನ್ನು ಬಡಿದೆಬ್ಬಿಸಿತ್ತು. ಅದರ ಪರಿಣಾಮವೇ ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ.

ಮುಸ್ಲಿಮರು ಮಾಡ್ತಿದ್ದ ವ್ಯಾಪಾರವನ್ನು ಈಗ ಹಿಂದೂಗಳೇ ಮಾಡಿಕೊಳ್ತಿದ್ದಾರೆ. ಹಿಂದೂ ಸಂಘಟನೆಗಳ ನೆರವಿನಿಂದ ಎರಡೇ ದಿನದಲ್ಲಿ ಕೋಳಿ, ಕುರಿಗಳ ಅಗತ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಯುವತಿಯ ಅಪಹರಿಸಿ ಅತ್ಯಾಚಾರವೆಸಗಿದ ಸಹೋದರರು