Publish Date: Wed, 06 Apr 2022 (13:19 IST)
Updated Date: Wed, 06 Apr 2022 (19:23 IST)
ಮುಂಬೈ : ಕೋವಿಡ್-19 ಹೊಸ ರೂಪಾಂತರಿ ಎಕ್ಸ್ಇʼ ಭಾರತದ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.
ವೈರಸ್ನ ಹೊಸ ರೂಪಾಂತರಿ ಕಂಡುಬಂದಿರುವ ರೋಗಿಗೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಹೊಸ ವರ್ಷದ ಆರಂಭದಲ್ಲಿ ರೂಪಾಂತರಿ ʼಎಕ್ಸ್ಇʼ ತಳಿ ವಿಶ್ವದಲ್ಲೇ ಪ್ರಥಮ ಬಾರಿಗೆ ಇಂಗ್ಲೆಂಡ್ನಲ್ಲಿ ವರದಿಯಾಗಿತ್ತು. ಈ ದೇಶದಲ್ಲಿ ಇದುವರೆಗೆ 637 ಪ್ರಕರಣಗಳು ವರದಿಯಾಗಿವೆ ಎಂದು ಬ್ರಿಟನ್ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಇದು ಓಮಿಕ್ರಾನ್ ಬಿಎ.1, ಬಿಎ.2ನ ಮರುಸಂಯೋಜಕವಾಗಿದೆ. ಈ ಹೊಸ ರೂಪಾಂತರಿ, ಓಮಿಕ್ರಾನ್ಗಿಂತಲೂ ವೇಗವಾಗಿ ಹರಡಬಲ್ಲದು ಎಂದು ಡಬ್ಲ್ಯೂಎಚ್ಒ ಮಾಹಿತಿ ನೀಡಿದೆ.