ಹೊಸ ಕೋವಿಡ್ ತಳಿ!?

Webdunia
ಶುಕ್ರವಾರ, 22 ಏಪ್ರಿಲ್ 2022 (08:19 IST)
ನವದೆಹಲಿ : ದಿಲ್ಲಿ ಹಾಗೂ ಸುತ್ತಲಿನ ರಾಜಧಾನಿ ವಲಯದಲ್ಲಿ ಏಕಾಏಕಿ ಕೋವಿಡ್ ಸಂಖ್ಯೆ ಏರಿಕೆ ಆಗತೊಡಗಿದೆ.
 
ಇದು ದೇಶಕ್ಕೆ ಮುನ್ನೆಚ್ಚರಿಕೆಯಂತಿದೆ. ಸೋಂಕು ಏರಿಕೆಗೆ ಹೆಚ್ಚು ಸೋಂಕುಕಾರಕವಾಗಿರುವ ಇತ್ತೀಚಿನ ಕೋವಿಡ್ ತಳಿಯಾದ ‘ಎಕ್ಸ್ಇ’ ಕಾರಣವೆ ಅಥವಾ ಇನ್ನಾವುದೋ ಹೊಸ ಕೋವಿಡ್ ತಳಿ ಕಾರಣವೇ ಎಂಬುದರ ಪತ್ತೆಗೆ ಸರ್ಕಾರ ಮುಂದಾಗಿದೆ.

ಹೀಗಾಗಿ ಕೋವಿಡ್ ಸೋಂಕಿತರ ಸ್ಯಾಂಪಲ್ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ. ಇನ್ನೊಂದು ವಾರದಲ್ಲಿ ಇದರ ವರದಿ ಬರುವ ನಿರೀಕ್ಷೆಯಿದೆ.

ದಿಲ್ಲಿಯಲ್ಲಿ ಕಳೆದ 1 ವಾರದಿಂದ ಕೋವಿಡ್ ಏರುತ್ತಿದೆ. ಮಂಗಳವಾರ ಇತ್ತೀಚಿನ ತಿಂಗಳಲ್ಲೇ ಗರಿಷ್ಠ ಎನ್ನಬಹುದಾದ 642 ಪ್ರಕರಣ ವರದಿಯಾಗಿದ್ದು, ಪಾಸಿಟಿವಿಟಿ ದರ ಶೇ.4.4ರಷ್ಟುದಾಖಲಾಗಿದೆ. ಈ ಹಿಂದೆ ಗುಜರಾತ್ನಲ್ಲಿ ‘ಎಕ್ಸ್ಇ’ ತಳಿ ಪತ್ತೆಯಾಗಿದ್ದರೂ ಅಲ್ಲಿ ಸೋಂಕು ವ್ಯಾಪಿಸಿರಲಿಲ್ಲ.

ಆದರೆ ದಿಲ್ಲಿ ಹಾಗೂ ರಾಜಧಾನಿ ವಲಯದಲ್ಲಿ ಮಾತ್ರ ಸೋಂಕು ದಿಢೀರ್ ವ್ಯಾಪಿಸುತ್ತಿದೆ. ಹೀಗಾಗಿ ಇದು ಹೊಸ ತಳಿಯ ಕೊರೋನಾ ವೈರಾಣುವೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸೀಕ್ವೆನ್ಸಿಂಗ್ ವರದಿ ಬಂದ ಬಳಿಕ ಈ ಅನುಮಾನಕ್ಕೆ ಪರಿಹಾರ ಸಿಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದ ಯಾವ ಜಿಲ್ಲೆಗಳಿಗೆ ಇಂದು ಯಾವ ಅಲರ್ಟ್ ಇಲ್ಲಿದೆ ಮಾಹಿತಿ

ಕಾಂಗ್ರೆಸ್ ಬಾಂಗ್ಲಾದವರನ್ನು ಅಕ್ರಮವಾಗಿ ಮತಪಟ್ಟಿಗೆ ಸೇರಿಸುತ್ತಿದೆ: ಆರ್ ಅಶೋಕ್ ಗಂಭೀರ ಆರೋಪ

ಜಾಮೀನು ಗಲಾಟೆ ಎಲ್ಲಿಯವರೆಗೆ ತಲುಪಿತು ನೋಡಿ.. ಹೀಗೂ ಧ್ವೇಷ ಸಾಧಿಸ್ತಾರಾ ಶಾಕಿಂಗ್ Video

ಜಿಬಿಎ ವಾರ್ಡ್‍ಗಳಲ್ಲಿ ಸಮಾನಾಂತರ ಎಸ್‍ಐಆರ್ ನಿಲ್ಲಿಸಲು ಶೋಭಾ ಕರಂದ್ಲಾಜೆ ಆಗ್ರಹ

ಕೇತನ್ ಅಗರ್ವಾಲ್ ಕೇಸ್ ನಲ್ಲಿ ಸಿಯಾ, ಚೇತನ್ ಗೆ ಹಳ್ಳ ತೋಡಲು ಪೊಲೀಸರ ಮಾಸ್ಟರ್ ಪ್ಲ್ಯಾನ್

ಮುಂದಿನ ಸುದ್ದಿ
Show comments