Select Your Language

Notifications

webdunia
webdunia
webdunia
webdunia

ಅ.1ರಿಂದ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ

ಅ.1ರಿಂದ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶ ನಿರ್ಬಂಧ
ಮೈಸೂರು , ಮಂಗಳವಾರ, 28 ಸೆಪ್ಟಂಬರ್ 2021 (13:55 IST)
ಮೈಸೂರು,ಸೆ.28 : ದಸರಾ ಪ್ರಯುಕ್ತ ಮೈಸೂರು ರಾಜಮನೆತನದವರು ಅರಮನೆ ಒಳ ಆವರಣದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಅ.1ರಿಂದ ವಿವಿಧ ದಿನಾಂಕಗಳಂದು ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶ ನಿರ್ಬಂಸಲಾಗಿದೆ.

ಈ ವಿಷಯವನ್ನು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ತಿಳಿಸಿದ್ದು, ಅ.1ರಂದು ಸಿಂಹಾಸನ ಜೋಡಣೆ ಪ್ರಯುಕ್ತ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರವೇಶವಿರುವುದಿಲ್ಲ.ಅ.7ರಂದು ಖಾಸಗಿ ದರ್ಬಾರ್ನಲ್ಲಿ ರಾಜವಂಶಸ್ಥರು ಧಾರ್ಮಿಕ ಪೂಜೆ ನಡೆಸುವುದರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರವೇಶ ನಿಷೇಸಲಾಗಿದೆ.
ಅ.14ರಂದು ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಹಾಗೂ ಅ.15ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಪ್ರವೇಶವಿರುವುದಿಲ್ಲ. ಅ.31ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿಂಹಾಸನ ವಿಸರ್ಜನಾ ಕಾರ್ಯಕ್ರಮ ಪ್ರವೇಶ ನಿರ್ಬಂಸಲಾಗಿದೆ ಎಂದು ಉಪನಿರ್ದೇಶಕ ಸುಬ್ರಮಣ್ಯ ಅವರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಎಸ್ ಎಸ್, ಬಿಜೆಪಿಯವರದ್ದು ತಾಲಿಬಾನ್ ಸಂಸ್ಕೃತಿ: ಸಿದ್ದರಾಮಯ್ಯ