Select Your Language

Notifications

webdunia
webdunia
webdunia
webdunia

ಕಾಫಿನಾಡಲ್ಲಿ ಮೈಕ್ಗಳ ತೆರವಿಗೆ ನಗರಸಭೆ

ಕಾಫಿನಾಡಲ್ಲಿ ಮೈಕ್ಗಳ ತೆರವಿಗೆ ನಗರಸಭೆ
ಚಿಕ್ಕಮಗಳೂರು , ಭಾನುವಾರ, 27 ಮಾರ್ಚ್ 2022 (08:35 IST)
ಚಿಕ್ಕಮಗಳೂರು : ಹಿಂದೂಯೇತರ ವರ್ತಕರಿಗೆ ನಿರ್ಬಂಧ ಹಾಕಬೇಕು ಎಂಬ ಕೂಗಿನ ಮಧ್ಯೆಯೇ ಈಗ ಆಪರೇಷನ್ `ಮೈಕ್’ ಅಭಿಯಾನ ಶುರುವಾಗಿದೆ.

ಚಿಕ್ಕಮಗಳೂರಿನ 13 ವಾರ್ಡ್ಗಳಲ್ಲಿರುವ ಪ್ರಾರ್ಥನಾ ಮಂದಿರ, ಚರ್ಚ್, ಮಸೀದಿಗಳ ಅನಧಿಕೃತ ಮೈಕ್ಗಳ ತೆರವಿಗೆ ನಗರಸಭೆ ನಿರ್ಧರಿಸಿದೆ.

ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್ಗಳನ್ನು ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದೆ.

ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು. ಮಾರ್ಚ್ 25ರಂದು ನಡೆದ ಬಜೆಟ್ನಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ತೀರ್ಮಾನ ಮಾಡಿದ್ದಾರೆ.

ನಗರಸಭೆ, ಸಮಾಜ ಹಾಗೂ ಜನಸಾಮಾನ್ಯರಿಗೆ ಶಾಂತಿ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ನಗರಸಭೆಯ ಈ ನಡೆಗೆ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ಕಾನೂನಿನ ಮಿತಿಯೊಳಗೆ ಇದ್ದರೆ ಯಾವುದೇ ತೊಂದರೆ ಇಲ್ಲ. ತೆರವು ಮಾಡುವುದಿಲ್ಲ. ಕಾನೂನಿನ ಮಿತಿಯಲ್ಲಿ ಇಲ್ಲದೆ, ಅಕ್ರಮವಾಗಿದ್ದರೆ ಮಾತ್ರ ತೆರವು ಎಂದು ನಗರಸಭೆ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಎದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ!?