Select Your Language

Notifications

webdunia
webdunia
webdunia
webdunia

ಇನ್ಮುಂದು ಸಾರಿಗೆ ನೌಕರರಿಗೆ ಹೆಚ್ಚುವರಿ ಕೆಲಸ

ಇನ್ಮುಂದು ಸಾರಿಗೆ ನೌಕರರಿಗೆ ಹೆಚ್ಚುವರಿ ಕೆಲಸ
ತಿರುವನಂತಪುರಂ , ಶನಿವಾರ, 10 ಸೆಪ್ಟಂಬರ್ 2022 (09:08 IST)
ತಿರುವನಂತಪುರಂ : ಕೇರಳ ರಾಜ್ಯ ಚೆಲ್ಲಿ ಸಾರಿಗೆ ಸಂಸ್ಥೆಯ ಉದ್ಯೋಗಿಗಳಿಗೆ 12 ಗಂಟೆಗಳ ಕರ್ತವ್ಯ ವ್ಯವಸ್ಥೆ ಜಾರಿಗೊಳಿಸಲು ಕೇರಳದ ಎಲ್ಡಿಎಫ್ ಸರ್ಕಾರ ನಿರ್ಧರಿಸಿದೆ.
 
ಈಗಾಗಲೇ ಕೇರಳದಲ್ಲಿರುವ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಹಾಗಾಗಿ ನಷ್ಟದಲ್ಲಿ ಇರುವ ಸಾರಿಗೆ ಸಂಸ್ಥೆಯನ್ನು ಲಾಭದ ಹಳಿಗೆ ತರುವ ನಿಟ್ಟಿನಲ್ಲಿ ಈ ಕ್ರಮವೆಂದು ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. 

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಬೆಂಬಲಿತ ಟ್ರಾನ್ಸ್ಪೋರ್ಟ್ ಡೆಮಾಕ್ರಾಟಿಕ್ ಫೆಡರೇಷನ್  ಒಂದೇ ಹಂತದ ಕರ್ತವ್ಯದ ಅವಧಿಗೆ ಬೆಂಬಲ ಇದೆ, ಆದರೆ, 12 ಗಂಟೆಗಳ ಬದಲಾಗಿ 8 ಗಂಟೆ ಇರಲಿ ಎಂದಿದೆ. ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ವಾರದ 6 ದಿನ ಕರ್ತವ್ಯ ನಿರ್ವಹಿಸಲು ನೌಕರರಿಗೆ ಸರ್ಕಾರ ಅವಕಾಶ ಮಾಡಿಕೊಡಲಿದೆ.

ಈಗಾಗಲೇ ಸಿಬ್ಬಂದಿ ಕೊರತೆಯಿಂದ ಡಿಪೋಗಳಲ್ಲಿ ನಿಂತಿರುವ 1,300 ಬಸ್ಗಳ ಸೇವೆಯನ್ನು ಮತ್ತೆ ಆರಂಭಿಸಲು ಸರ್ಕಾರ ಚಿಂತಿಸಿದ್ದು, 8 ಗಂಟೆಗಳ ಕರ್ತವ್ಯಕ್ಕೆ ಬದಲಾಗಿ ನಾಲ್ಕು ಗಂಟೆ ಹೆಚ್ಚುವರಿ ಕರ್ತವ್ಯ ನಿರ್ವಹಿಸುವ ಬಸ್ ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಂಗಿ ಮೇಲೆ ಅಣ್ಣನಿಂದಲೇ ಅತ್ಯಾಚಾರ!